ಅತ್ಯಂತ ಪ್ರಭಾವಿ ಗ್ರಹಗಳಲ್ಲಿ ಬುಧ ಗ್ರಹ ಕೂಡ ಒಂದು. ಬುಧ ದೆಸೆ, ಬುಧನ ಮನೆ ಹಾಗೂ ಸಂಚಾರ ನಮ್ಮ ಜೀವನದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ.
ಏಪ್ರಿಲ್ 7 ರಂದು ಮಧ್ಯಾಹ್ನದ 2.16ಕ್ಕೆ ಬುಧಗ್ರಹವು ಮೀನ ರಾಶಿ ಪ್ರವೇಶಿಸುತ್ತಿದೆ.ಬುಧನ ಈ ಸಂಚಾರ 12 ರಾಶಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಗೆ ಬುಧನ ಆಗಮನದಿಂದ ದ್ವಾದಶ ರಾಶಿಗಳ ಫಲಾಫಲಗಳೇನು ಎನ್ನುವುದನ್ನು ನೋಡುವುದಾದರೆ….
ಮೇಷ : ಈ ರಾಶಿಯ 3 ಮತ್ತು6 ನೇ ಮನೆಯನ್ನು ಆಳುವ ಗ್ರಹ ಬುಧ. ಈಗ ಮೀನಾ ರಾಶಿಯನ್ನು ಅರ್ಥಾತ್ 12 ನೇ ಮನೆಯನ್ನು ಪ್ರವೇಶಿಸುತ್ತಿದ್ದಾನೆ. ಈ ಮನೆಯು ಮೇಷ ರಾಶಿಯವರಿಗೆ ವ್ಯಯದ ಮನೆ. ಹೀಗಾಗಿ ಬುಧ ಮೀನಾ ರಾಶಿಗೆ ಪ್ರವೇಶಿಸುವುದರಿಂದ ಮೇಷ ರಾಶಿಯವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಆರೋಗ್ಯದಲ್ಲಿ ವ್ಯತ್ಯಯ, ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದಿರುವುದು, ಅಪಯಶ, ಅಧಿಕ ಖರ್ಚು ಮೊದಲಾದ ಅಶುಭ ಫಲಗಳಿವೆ. ಆದರೆ, ಕಾನೂನು ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾಗಶಃ ಯಶ ಉಂಟು. ವಿದೇಶಿ ಸಂಸ್ಥೆಗಳಿಂದ ಉದ್ಯೋಗವಕಾಶವಿದೆ. ಕಾನೂನು ಶಿಕ್ಷಣ ಪಡೆಯುತ್ತಿರುವವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ.
ವೃಷಭ : ಬುಧ ವೃಷಭ ರಾಶಿಯ 2 ನೇ ಮತ್ತು 5 ನೇ ಮನೆ ಆಳುವವನು. ಮೀನ ರಾಶಿಗೆ ಅಂದರೆ ವೃಷಭ ರಾಶಿಯ 11 ನೇ ಪ್ರವೇಶಿಸುತ್ತಿದ್ದಾನೆ. ವೃಷಭ ರಾಶಿಗೆ ಇದು ಲಾಭದಾಯಕ. ವ್ಯಾಪರ – ವ್ಯವಹಾರಗಳಲ್ಲಿ ಯಶಸ್ಸು ಕಾಣುವರು. ಸೂಕ್ತ ಹೂಡಿಕೆಗೆ ಮುಂದಾಗಲು ಒಳ್ಳೆಯ ಕಾಲ. ಆದಾಯದ ಒಳ ಹರಿವು ಹೆಚ್ಚಾಗಲಿದೆ.ಪ್ರೀತಿಯಲ್ಲಿ ಯಶಸ್ಸು ಸಿಗಲಿದೆ. ಬೌದ್ಧಿಕ ಸಾಮರ್ಥ್ಯ ಹೆಚ್ಚುವುದು. ಆರ್ಥಿಕ ಸ್ಥಿತಿ ಬಲಗೊಳ್ಳುವುದು.
ಮಿಥುನ : ಬುಧ ಗ್ರಹ ಮೀನ ರಾಶಿ ಪ್ರವೇಶ ಮಿಥುನ ರಾಶಿಯ 10 ನೇ ಮನೆ ಸೂಚಿಸುತ್ತದೆ. ಮೀನ ರಾಶಿಗೆ ಬುಧನ ಆಗಮನದಿಂದ ಮಿಥುನ ರಾಶಿಯವರು ವೃತ್ತಿಜೀವನದಲ್ಲಿ ಸಾಕಷ್ಟು ಅನುಕೂಲಕರ ನಿರ್ಧಾರ ತೆಗೆದುಕೊಳ್ಳಲು ಸೂಕ್ತವಾಗಿದೆ. ಅತಿಯಾದ ಆತ್ಮವಿಶ್ವಾಸದಿಂದ ಹಾನಿ. ಹೀಗಾಗಿ ಕೆಲಸದ ವಿಚಾರದಲ್ಲೂ ತೊಂದರೆ.ಮನೆಯಲ್ಲಿ ಪ್ರೀತಿ, ಸಂತೋಷದ ವಾತಾವರಣ ಇರುವುದು.ಬುದ್ಧಿ, ಆಲೋಚನೆಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಉತ್ತಮ ಫಲ ನಿರೀಕ್ಷಿಸಬಹುದು. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.
ಕಟಕ : ಈ ರಾಶಿಯ 12 ನೇ ಮತ್ತು 3 ನೇ ಮನೆಯನ್ನು ಆಳುವವನು ಬುಧ. ಮೀನ ರಾಶಿಗೆ ಈತನ ಪ್ರವೇಶವೆಂದರೆ ಕಟಕ ರಾಶಿಯ 9 ನೇ ಮನೆ. ಈ ಬದಾಲವಣೆಯಿಂದ ಕಟಕ ರಾಶಿಯವರಿಗೆ ವಿದೇಶಿ ಪ್ರಯಾಣ ಸಂಭವವಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬಯಸಿರುವವರ ಕನಸು ಈಡೇರುವ ಸಂದರ್ಭ. ಬೌದ್ಧಿಕ ಸಾಮರ್ಥ್ಯ , ಸಾಮಾಜಿಕ ಸ್ಥಾನಮಾನ ಹೆಚ್ಚುವುದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವರು. ಆದಾಯದ ಒಳಹರಿವು ನಿರೀಕ್ಷಿಸಬಹುದು. ತೋಟಗಾರಿಕೆ, ಬರವಣಿಗೆ, ನಟನೆ ಹವ್ಯಾಸ ಇರುವವರಿಗೆ ಆಸಕ್ತಿ ಹೆಚ್ಚುವುದು. ಕಠಿಣ ಪರಿಶ್ರಮದಿಂದ ಲಾಭ. ಬಹಿರಂಗ ಕೆಲವು ವರ್ತನೆಗಳಿಂದ ನಷ್ಟ.
ಸಿಂಹ : ಮೀನ ರಾಶಿಗೆ ಬುಧನ ಪ್ರವೇಶವೆಂದರೆ ಸಿಂಹ ರಾಶಿಯ 8ನೇ ಮನೆಯನ್ನು ಆಳುವುದು. ಈ ಮನೆಯಲ್ಲಿ ಬುಧನ ವಾಸ ಸಾಕಷ್ಟು ತೊಂದರೆಗಳಿಗಳನ್ನುಂಟು ಮಾಡುವ ಸಾಧ್ಯತೆ ಹೆಚ್ಚು. ಕೊನೇ ಸಮಯದಲ್ಲಿ ಒಂದಿಷ್ಟು ಒಳಿತು.
ಆದಾಯದಲ್ಲಿ ಕುಸಿತ ಕಂಡು ಬಂದರೂ ಒಂದು ಮಟ್ಟದಲ್ಲಿ ಹಠಾತ್ ಪ್ರಗತಿ ನಿರೀಕ್ಷಿಸಬಹುದು. ಉದ್ಯೋಗದಲ್ಲಿ ಏರಿಳಿತ. ಮೇಲಾಧಿಕಾರಿಗಳೊಂದಿಗೆ ಕಿರಿಕಿರಿ ,ಕೆಲಸ ಕಳೆದುಕೊಳ್ಳುವ ಸಂಭವ.
ಕನ್ಯಾ : ಬುಧ ಗ್ರಹವು ಕನ್ಯಾ ರಾಶಿಯ 7 ನೇ ಮನೆ ಆಳುತ್ತದೆ. ಈಗ ಅಸ್ಥಿರ ಚಲನೆ ಮೂಲಕ 10 ನೇ ಮನೆ ಆಳುವುದು. ಉದ್ಯೋಗ ಕ್ಷೇತ್ರದಿ ಯಶಸ್ಸು, ಹೊಸ ಯೋಜನೆ ಕೈಗೊಳ್ಳುವುದು ಸೇರಿದಂತೆ ಶುಭಫಲ ನಿರೀಕ್ಷಿಸಬಹುದು. ಸಂಗಾತಿ ಬಗ್ಗೆ ಕಾಳಜಿ ಹೆಚ್ಚುವುದು.
ತುಲಾ : ಈ ರಾಶಿಯ 9ನೇ ಮತ್ತು 10 ನೇ ಮನೆಯನ್ನು ಆಳುವ ಗ್ರಹ ಬುಧ. ಇದೀಗ ಅಸ್ಥಿರ ಚಲನೆ ಮೂಲಕ 6 ನೇ ಮನೆಯನ್ನು ಪ್ರವೇಶಿಸುತ್ತಾನೆ. ಇದರಿಂದ ಈ ರಾಶಿಯವರು ಯಶಸ್ಸಿಗಾಗಿ ಶ್ರಮವಹಿಸಬೇಕಾಗುತ್ತದೆ. ಆದರೆ, ಶ್ರಮಕ್ಕೆ ತಕ್ಕ ಯಶಸ್ಸು ಸಿಗುತ್ತದೆ. ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಚಿಂತೆ, ಆದಾಯ ಕಡಿಮೆ, ಅನಗತ್ಯ ವಾದ, ಖರ್ಚು ಇದೆ. ನಿಮ್ಮಿಂದ ಪ್ರತಿಸ್ಪರ್ಧಿಗಳು ಒಂದಿಷ್ಟು ಲಾಭವಿದೆ.
ವೃಶ್ಚಿಕ : ಈ ರಾಶಿಯ 8 ಮತ್ತು 11 ನೇ ಮನೆಯನ್ನು ಬುಧಗ್ರಹ ಆಳುವನು. ಇದೀಗ ಅಸ್ಥಿರ ಚಲನೆ ಮೂಲಕ 5 ನೇ ಮನೆಯನ್ನು ಆಳುತ್ತಾನೆ. ಬುಧನ ಬದಲಾವಣೆಯಿಂದ ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಅನುಕೂಲ ಮತ್ತು ಪ್ರತಿಕೂಲ ಪರಿಣಾಮಗಳಿವೆ. ಸಂಗಾತಿ ನಿಮ್ಮೊಂದಿಗೆ ಪ್ರೀತಿ ಕಾಳಜಿಯಿಂದ ಇರುವರು. ವಿವಾಹವಾದವರು ಮಕ್ಕಳನ್ನು ಪಡೆಯುವರು. ಹಠಾತ್ ಆರ್ಥಿಕ ಲಾಭ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಶುಭ.
ಧನು : ಬುಧ ಧನು ರಾಶಿಯ 7 ಮತ್ತು 10 ನೇ ಮನೆ ಆಳುತ್ತಾನೆ. ಅಸ್ಥಿರ ಚಲನೆಯಿಂದ 4 ನೇ ಮನೆ ಪ್ರವೇಶಿಸುವನು. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ.
ಮಕರ : ಬುಧ ಮಕರ ರಾಶಿಯ 6 ಮತ್ತು 9 ನೇ ಮನೆ ಆಳುವನು. ಇದೀಗ ಮೀನ ರಾಶಿ ಪ್ರವೇಶದಿಂದ ಮೂರನೇ ಮನೆ ಆಳುವವನು. ಈ ಬದಲಾವಣೆ ಮಕರ ರಾಶಿಯವರು ತಮ್ಮ ಸಂವಹನ ಕೌಶಲ್ಯದ ಬಗ್ಗೆ ಕಾಳಜಿವಹಿಸಬೇಕು. ನಿಮ್ಮ ಮಾತುಗಳಿಂದ ಆತ್ಮೀಯರಿಗೆ ಸಾಕಷ್ಟು ನೋವುಂಟಾಗಲಿದೆ. ನಿಮ್ಮ ಪ್ರತಿಸ್ಪರ್ಧಿಗಳು ಸಕ್ರಿಯರಾಗುತ್ತಾರೆ. ಬ್ಯಾಂಕ್ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಕಾನೂನು, ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಯ.
ಕುಂಭ : ಈ ರಾಶಿಯವರಿಗೆ ಬುಧ ಗ್ರಹವು 8 ಮತ್ತು 5 ನೇ ಮನೆ ಆಡಳಿತಗಾರ.ಮೀನ ರಾಶಿ ಪ್ರವೇಶದಿಂದ 2 ನೇ ಮನೆ ಆಳುವನು.
ನೀವು ನಿಮ್ಮ ಸ್ನೇಹಿತರೊಂದಿಗೆ ಮಾತಾಡುವಾಗ ಸಾಕಷ್ಟು ನೋವನುಭವಿಸಬಹುದು. ಇಲ್ಲ ಕಷ್ಟದ ಸಮಯ ಎದುರಿಸಬೇಕಾಗುವುದು. ಆಹಾರ ಪದ್ಧತಿ ಬಗ್ಗೆ ಗಮನ ಅತ್ಯಗತ್ಯ. ಸಾಕಷ್ಟು ಹಣ ಸಂಪಾದಿಸಲು ಸೂಕ್ತ ಕಾಲ. ಹಠಾತ್ ಲಾಭದಿಂದ ಭವಿಷ್ಯ ಬದಲಾವಣೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ. ಸಂಗಾತಿ ನಡುಗೆ ಉತ್ತಮ ಸಂಬಂಧ ವೃದ್ಧಿ.
ಮೀನ : ಬುಧ ಗ್ರಹ ಮೀನ ರಾಶಿಯ 4 ಮತ್ತು 7ನೇ ಮನೆ ಆಳುತ್ತಾನೆ. ಆದರೆ ಇದೀಗ ಆರೋಹಣ ಮನೆಯಲ್ಲಿ ನೆಲೆಸುತ್ತಾನೆ. ಈ ಬದಲಾವಣೆ ಬೌದ್ಧಿಕ ಸಾಮಾರ್ಥ್ಯ ಮತ್ತು ಏಕಾಗ್ರತೆ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ಸೂಕ್ತವಲ್ಲ. ಹಾಗಾದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಶೀಘ್ರ ಬದಲಾವಣೆ ಸಾಧ್ಯ. ಪ್ರೇಮಿಗಳಿಗೆ ಉತ್ತಮ ಸಮಯ.