ಮುಖ್ಯಮಂತ್ರಿಯವರೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ, ನಿಮ್ಮ ನಾಟಕ ತಂಡದ ಬಗ್ಗೆ ತಮಗೂ ತಿಳಿದಿದೆ. ನೋಟಿಸ್ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮೀಸಲಾತಿ ನೀಡಿ ಇಲ್ಲದಿದ್ದಲ್ಲಿ ಕುರ್ಚಿ ಖಾಲಿ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ಬಸನಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಮೀಸಲಾತಿ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರೆ 25 ಸಂಸದರನ್ನು ಕರೆದುಕೊಂಡು ದೆಹಲಿಗೆ ಹೋಗಿ ಮೀಸಲಾತಿ ಕೇಳಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ನಾನು ಅಲ್ಲಿಗೆ ಏಕೆ ಹೋಗಲಿ. ನಿಮ್ಮಕಡೆ ಬೀಗದ ಕೈ ಇಟ್ಟುಕೊಂಡು ಮತ್ತೊಬ್ಬರ ಕಡೆ ಕೈ ತೋರಿಸಿದರೆ ನಾವೇಕೆ ಹೋಗಬೇಕು ಎಂದು ಯಡಿಯೂರಪ್ಪ ಅವರಿಗೆ ಬಿಸಿ ಮುಟ್ಟಿಸಿದರು.ದೆಹಲಿಗೆ ಹೋಗಬೇಕು ಅಂದರೆ ವೀರಶೈವ ಲಿಂಗಾಯತ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕಾದಲ್ಲಿ ನಾವು ದೆಹಲಿಗೆ ಹೋಗುತ್ತೇನೆ ಎಂದು ಯತ್ನಾಳ್ ಮಾತಿನ ಚಾಟಿ ಬೀಸಿದರು.