ಇಂದು ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ ರಾಯಚೂರಿನಲ್ಲಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅಥವಾ ದೇವೇಗೌಡ ಇಬ್ಬರಲ್ಲಿ ಒಬ್ಬರು ಗುಡ್ಡ ಸೇರಬೇಕು, ಕುಮಾರಸ್ವಾಮಿ ತಂದೆಗೆ ರೋಗ ಬಂದಿದೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಮತ್ತು ದೇವೇಗೌಡರ ನಡುವೆ ಸಾಲಮನ್ನಾ ವಿಚಾರದಲ್ಲಿ ಮನಸ್ತಾಪವಿದೆ. ತಂದೆ ಮಗನ ನಡುವೆ ವ್ಯಾಜ್ಯ ಬಂದಿದೆ. ಅದರ ಪ್ರತಿಫಲವೇ ಇಂದಿನ ಕುಮಾರಸ್ವಾಮಿ ಉತ್ತರವಾಗಿದೆ, ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು, ಮಾಜಿ ಪ್ರಧಾನಿ ನಿವೃತ್ತಿ ಹೊಂದು ಯಾವುದಾದರೂ ಗುಡ್ಡ ಸೇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು