ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12.30ಗೆ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ವಿಶ್ಲೇಷಿಸುವ ಉದ್ದೇಶದಿಂದಲೇ ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಪುಟ ಸಭೆಯ ಬಳಿಕ ರಾಜ್ಯಪಾಲರ ಭೇಟಿಗೂ ಕುಮಾರಸ್ವಾಮಿ ಅವಕಾಶ ಕೇಳಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ್ದು ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳೂ ಕೂಡ ಎಲ್ಲ ಕಡೆ ಕೇಳಿಬರುತ್ತಿವೆ.
ರಾಜ್ಯ ಚುನವಣಾ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಒಂದೊಂದು ಸೀಟುಗಳನ್ನು ಪಡೆದಿರುವುದು ವೈಯಕ್ತಿಕವಾಗಿಯೂ ಅಪ್ಪ ಹಾಗೂ ಮಗನ ಕ್ಷೇತ್ರವನ್ನು ಸೋತಿರುವುದು ಮುಖ್ಯಮಂತ್ರಿಯವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.
ಇನ್ನೊಂದೆಡೆ ಮೈತ್ರಿ ಮುಂದುವರೆಸಿಕೊಂಡು ಹೋಗಬೇಕಾ..? ಅಥವಾ ಕೇವಲ ಮುಖ್ಯಮಂತ್ರಿ ಬದಲಾಯಿಸುವ ನಿರ್ಣಯಕ್ಕೆ ಬರಬೇಕಾ..? ಅಥವಾ ಮೈತ್ರಿಯನ್ನೇ ಖತಂ ಗೊಳಿಸಬೇಕಾ ಎನ್ನುವ ಚರ್ಚೆಗಳು ನಡೆಯಲಿದ್ದು ಇದೀಗ ಈ ಸಭೆ ಎಲ್ಲರ ಗಮನವನ್ನು ಕೇಂದ್ರೀಕರಿಸಿದೆ.