ದಾವಣಗೆರೆ: ಬಿಳಿ ರಕ್ತ ಕಣದ ಕೊರತೆ ಇಲ್ಲ, ಎಲ್ಲಾ ಕಡೆ ಸಿಗ್ತಾ ಇದೆ ಯಾವುದೇ ಕೊರತೆ ಇಲ್ಲ ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ದ ಬಿಜೆಪಿಯವರು ಪಾದಯಾತ್ರೆ ಮಾಡಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಅದೇ ನಮ್ಮ ಉದ್ದೇಶ. ಆದ್ರೆ ಮೂಡಾ ಬಗ್ಗೆ ನಾವು ಅಧಿವೇಶನದಲ್ಲಿ ಸಾಕ್ಷೀ ಸಮೇತಾ ಮಾತನಾಡುತ್ತೇವೆ ಎಂದು ಹೇಳಿದರು.
ಇನ್ನೂ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಎಲ್ಲಾ ಕಡೆ ಉತ್ಪತ್ತಿಯಾಗುವ ಲಾರ್ವ ಗಳನ್ನು ನಾಶ ಮಾಡುವ ಕೆಲಸ ಮಾಡುತ್ತೇವೆ. ಈಗಾಗಲೇ ಡೆಂಗ್ಯೂ ಪತ್ತೆಯಾಗುವ ಜಾಗದಲ್ಲಿ ಹೆಚ್ವು ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಖಾಸಗಿ ಲ್ಯಾಬ್ ಗಳಲ್ಲಿ ಡೆಂಗ್ಯೂ ಟೆಸ್ಟ್ ಗೆ 300 ರೂಪಾಯಿ ನಿಗದಿ ಮಾಡಲಾಗಿದೆ. ಹೆಚ್ಚು ತೆಗೆದುಕೊಳ್ಳುವುದು ಕಂಡು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಮೆಡಿಕಲ್ ಎಮರ್ಜೆನ್ಸಿ ಮಾಡುವ ಅವಶ್ಯಕತೆ ಇಲ್ಲ !
Date: