ಮೇ 25 ರ ವರೆಗೂ ಕಾದು ನೋಡಿ ಆಮೇಲೆ ಏನಾಗುತ್ತೆ ನಿಮಗೆ ಗೊತ್ತಾಗುತ್ತೆ..!?

0
181

ಏಪ್ರಿಲ್ 23 ನೇ ತಾರೀಖಿನಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್ ನಲ್ಲಿ ಇರುವುದಿಲ್ಲ ಆದಷ್ಟು ಬೇಗ ರಾಜಿನಾಮೆ ನೀಡಿ ಹೊರಗೆ ಬರುತ್ತೇನೆ ನನ್ನ ಜೊತೆಗೆ ಇನ್ನೂ ಹಲವರು ರಾಜಿನಾಮೆ ನೀಡಲು ಸಿದ್ದರಾಗಿದ್ದಾರೆ ಎಂದು ಬಾಂಬ್ ಸಿಡಿಸುವುದರ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಿ ನಂತರ ಯಾಕೋ ಸೈಲೆಂಟ್ ಆಗಿ ಬಿಟ್ಟರು.


ಆದರೆ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದಲ್ಲದೆ ತಮ್ಮ ಸೋದರ ಸತೀಶ್ ಜಾರಕಿಹೊಳಿ ವಿರುದ್ಧವೂ ನೇರವಾಗಿಯೇ ಆರೋಪವನ್ನು ಸಹ ಮಾಡಿದರು.


ರಾಜೀನಾಮೆಯ ಬೆದರಿಕೆ ನಂತರ ಇದೀಗ ಮತ್ತೊಂದು ಹೇಳಿಕೆಯನ್ನು ನೀಡಿರುವ ರಮೇಶ್ ಜಾರಕಿಹೊಳಿ ಕೆಂಪು ದೀಪಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ ವಿಶ್ವಾಸ ದ್ರೋಹಿಗಳು, ಬೆನ್ನಿಗೆ ಚೂರಿ ಹಾಕುವವರನ್ನು ಎಂದಿಗೂ ನಂಬಬೇಡಿ ಇವತ್ತು ಮೈತ್ರಿ ಸರ್ಕಾರದಲ್ಲಿ ಯಾರೆಲ್ಲಾ ಸಚಿವರಿಂದ ಹೇಳಿಕೊಂಡು ತಿರುಗು ತಿರುಗಾಡುತ್ತಿದ್ದಾರೆ.

ಅವರೆಲ್ಲ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಮೇ 25ರ ಬಳಿಕ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here