ಚಾಮುಂಡೇಶ್ವರಿ ದೇವಿ ದರ್ಶನದ ಬಳಿಕ ಮಾತನಾಡಿದ ರೇವಣ್ಣ, ವಿಶ್ವಾಸ ಮತಯಾಚನೆಗಾಗಿಯೇ ಸಿಎಂ ಕುಮಾರಸ್ವಾಮಿ ಜುಲೈ 12 ರಂದು ಕೇಳಿದ್ದರು. ಅಲ್ಲದೇ 12 ರಂದು ಸಭೆ ಕೂಡ ಕರೆದಿದ್ದರು. ಬಿಜೆಪಿಯವರು ಬಂದಿಲ್ಲ. ಜುಲೈ 18 ರಂದು ಮತ್ತೆ ವಿಶ್ವಾಸಮತಕ್ಕೆ ಬಂದೆವು. ಆಗ ಸುಪ್ರೀಂಕೋರ್ಟ್ ಕೆಲವು ಡೈರೆಕ್ಷನ್ ನೀಡಿತ್ತು ಎಂದರು.
ಇದೇ ಬಿಜೆಪಿಯ ಈ ಹಿಂದಿನ ಪ್ರಧಾನ ವಾಜಪೇಯಿ ಅವರು ವಿಶ್ವಾಸಮತ ತೋರಿಸಲು ಹತ್ತು ದಿನ ಸಮಯ ತೆಗೆದುಕೊಂಡಿದ್ದರು. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.