ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಲಿಲ್ಲ, ಜೆಡಿಎಸ್ ಶಾಸಕರನ್ನು ದೇವೇಗೌಡರು, ಕುಮಾರಸ್ವಾಮಿ ಕೇಳಲಿಲ್ಲ. ಯಾರನ್ನು ಕೇಳದೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಪಕ್ಷ ರಾಜಕಾರಣ ಇಲ್ಲದಿರುವುದರಿಂದ ಪಕ್ಷಾಂತರ ನಡೆಯಿತು ಎಂದು ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಸಮಬಲರು. ಅವರ ಇಚ್ಛೆಯಂತೆ ಸಮ್ಮಿಶ್ರ ಸರ್ಕಾರ ಮಾಡಿಕೊಂಡು ಬಂದರು. ಆಮೇಲೆ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿದರು. ಅವರ ಪಾಡಿಗೆ ಅವರು ನಿರ್ಧಾರ ಕೈಗೊಂಡರು. ಪಕ್ಷ ರಾಜಕಾರಣ ಇಲ್ಲದಿದ್ದರಿಂದ ಪಕ್ಷಾಂತರ ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.