ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮ ಎಲ್ಲಾ ರಾವಣನ ರೀತಿ, ಅವರ ಅಪ್ಪ ರಾವಣ ಎಂದು ಹೆಸರಿಡಬೇಕಿತ್ತು. ಆದರೆ, ರೇವಣ್ಣ ಎಂದು ಇಟ್ಟುಬಿಟ್ಟಿದ್ದಾರೆ. ಸರ್ಕಾರ ಬೀಳೋಕೆ ರೇವಣ್ಣನೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಲಕ್ಷ್ಮಣ್ ಸವದಿ ಅವರನ್ನು ಭೇಟಿ ಕುರಿತು ಮಾತನಾಡಿದ ಅವರು, ಲಕ್ಷ್ಮಣ್ ಸವದಿ ನನ್ನನ್ನು ಬಿಜೆಪಿಗೆ, ನಾನು ಅವರನ್ನು ಕಾಂಗ್ರೆಸ್ ಗೆ ಕರೆದಿಲ್ಲ. ಅವರು ನಾನು 25 ವರ್ಷಗಳ ಸ್ನೇಹಿತರು.ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ ಎಂದರು.