ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬಂದು ರಾಜಕಾರಣ ಮಾಡಿದ್ದರಿಂದಲೇ ಮೈತ್ರಿ ಸರ್ಕಾರದ ಸಂಕಷ್ಟಕ್ಕೆ ಕಾರಣ. ಕುಮಾರಸ್ವಾಮಿ ಸರ್ಕಾರದ ಕುರ್ಚಿಯ ನಾಲ್ಕು ಕಾಲು ಮುರಿದುಹೋಗುವ ಮಟ್ಟಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕರು ರೈತರ ಸಂಕಷ್ಟಗಳಿಗೆ ರಾಜೀನಾಮೆ ನೀಡುವುದಿಲ್ಲ. ಮಂತ್ರಿಗಿರಿಗಾಗಿ ಮಾತ್ರ ರಾಜೀನಾಮೆ ನೀಡುತ್ತಿದ್ದಾರೆ. ಇಂತಹ ನಾಚಿಕೆಗೆಟ್ಟ, ಮರ್ಯಾದೆಗೆಟ್ಟ, ಹೇಸಿಗೆಯ ರಾಜಕಾರಣ ದೇಶದ ಇತಿಹಾಸದಲ್ಲಿ ನಡೆದಿಲ್ಲ ಎಂದು ಕಿಡಿಕಾರಿದರು.