ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೆ ಐವರು ಶಾಸಕರ ನೆರವು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅತೃಪ್ತ ಐವರು ಶಾಸಕರ ಮನವೊಲಿಕೆಗೆ ಭಾರೀ ಕಸರತ್ತು ನಡೆಸುತ್ತಿದ್ದಾರೆ. ರೋಷನ್ ಬೇಗ್, ಎಂಟಿಬಿ ನಾಗರಾಜ್, ರಾಮಲಿಂಗರೆಡ್ಡಿ, ಸುಧಾಕರ್ ಜೊತೆ ಮತ್ತೊಬ್ಬ ಅತೃಪ್ತ ಶಾಸಕರ ಮನವೊಲಿಸಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎನ್ನಲಾಗಿದೆ.
ಆದರೆ, ಬಿಜೆಪಿಯು ಮೈತ್ರಿ ಸರ್ಕಾರದ ಉರುಳಿಸಲು ದೋಸ್ತಿಯಿಂದ ಐವರು ಶಾಸಕರ ರಾಜೀನಾಮೆಗೆ ಪ್ಲಾನ್ ಮಾಡಿದೆ.