ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ ಬಳಿಕ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಪ್ರಸ್ತಾವನೆಯನ್ನು ಮತದಾನಕ್ಕೆ ಕೋರಿದರು. ಬಳಿಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಮತಎಣಿಕೆ ನಡೆಸುವಂತೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.
ನಂತರ ಸರತಿಯಂತೆ ಒಬ್ಬೊಬ್ಬ ಶಾಸಕರನ್ನು ಎಣಿಕೆ ಮಾಡಲಾಯಿತು. ವಿಶ್ವಾಸ ಮತ ಪ್ರಸ್ತಾವನೆಯ ಪರ 99 ಮತಗಳು ಹಾಗೂ ವಿರುದ್ಧವಾಗಿ 105 ಮತಗಳು ಬಂದವು. ಪ್ರಕ್ರಿಯೆ ಮುಗಿದ ನಂತರ ರಮೇಶ್ ಕುಮಾರ್ ಅವರು ಫಲಿತಾಂಶವನ್ನು ಪ್ರಕಟಿಸಿ ವಿಶ್ವಾಸಮತ ಬಿದ್ದುಹೋಗಿದೆ ಎಂದು ಅಧಿಕೃತವಾಗಿ ಘೋಷಿಸಿದರು. ‘
ವಿಶ್ವಾಸಮತಯಾಚನೆಯಲ್ಲಿ ಸೋಲು ಉಂಟಾಗುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪಾತ್ರವನ್ನು ಸಲ್ಲಿಸುವರು. ನಂತರ ಸದನವನ್ನು ಅನಿರ್ಧಾವಧಿ ವರೆಗೆ ಮುಂದೂಡಲಾಯಿತು.