ದಿ ವಿಲನ್ ಚಿತ್ರದ ಬಳಿಕ ಜೋಗಿ ಪ್ರೇಮ್ ಅವರು ತಮ್ಮ ಮುಂದಿನ ಚಿತ್ರವನ್ನು ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಮೈಸೂರು ಮತ್ತು ಸುತ್ತಮುತ್ತ ಭಾಗಗಳಲ್ಲಿ ನಡೆಯುತ್ತಿದ್ದು ಚಿತ್ರದಲ್ಲಿ ರಚಿತಾರಾಮ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಚಿತ್ರತಂಡ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದು ನಗರದ ಪ್ರಸಿದ್ಧ ದೋಸೆ ಹೋಟೆಲ್ ಆದ ಮೈಲಾರಿ ದೋಸೆ ಹೋಟೆಲ್ ನಲ್ಲಿ ದೋಸೆ ಸವಿದಿದೆ. ಹೌದು ನಿರ್ದೇಶಕ ಜೋಗಿ ಪ್ರೇಮ್ ಮತ್ತು ರಚಿತಾ ರಾಮ್ ಅವರು ಮೈಲಾರಿ ದೋಸೆ ಹೋಟೆಲ್ಗೆ ಭೇಟಿ ನೀಡಿ ದೋಸೆಯನ್ನು ತಿಂದಿದ್ದಾರೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.