ಮೈಸೂರು ಅರಮನೆಯಲ್ಲಿ ಸೈರಾ ಶೂಟಿಂಗ್..!!
ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್ ನ ಸ್ವತಂತ್ರ ಪೂರ್ವ ಸಿನಿಮಾ ಸೈರಾ.. 19 ಶತಮಾನದ ಪಾಳೇಗಾರ ನರಸಿಂಹರೆಡ್ಡಿಯ ಅವತಾರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿದ್ದಾರೆ.. ಈ ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಕೂಡ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..
ಈಗ ಸೈರಾ ನರಸಿಂಹರೆಡ್ಡಿ ಕರ್ನಾಟಕಕ್ಕೆ ಬರ್ತಿದ್ದಾರೆ.. ಅದರಲ್ಲು ಮೈಸೂರಿನ ಅರಮನೆಯಲ್ಲಿ ಈ ಚಿತ್ರದ ಶೂಟಿಂಗ್ ಸೋಮವಾರದಿಂದ ನಡೆಯಲಿದೆ.. ಇದಕ್ಕೆ 25 ದಿನಗಳ ಕಾಲ ಅವಕಾಶ ಮಾಡಿಕೊಡಲಾಗಿದೆ.. ಅಂದಹಾಗೆ ಚಿರಂಜೀವಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ತಮಿಳಿನ ನಟ ವಿಜಯ್, ಅಮಿತಾಬ್ ಬಚ್ಚನ್ ಕೂಡ ಅಭಿನಯಿಸಿದ್ದಾರೆ..