ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ಈಗಾಗಲೇ ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸಿನಿಮಾ ರಿಲೀಸ್ ಗೆ ಕಿಚ್ಚನ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಹೆಬ್ಬುಲಿ ಖ್ಯಾತಿಯ ಡೈರೆಕ್ಟರ್ ಕೃಷ್ಣ ಹಾಗೂ ಸುದೀಪ್ ಕಾಂಬಿನೇಷನ್ನ ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಈ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಸುದೀಪ್ ಈ ಸಿನಿಮಾದಲ್ಲಿ ಕುಸ್ತಿ ಪಟುವಾಗಿ, ಬಾಕ್ಸರ್ ಆಗಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಸುದೀಪ್ ಮೈಸೂರು ದಸರಾದಲ್ಲೂ ಕುಸ್ತಿ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಪೈಲ್ವಾನ್ ನಲ್ಲಿ ಕುಸ್ತಿ ಪಟು ಓಕೆ, ರಿಯಲ್ ಲೈಫಲ್ಲೂ ಕುಸ್ತಿ ಪಟು ಆಗಿಬಿಟ್ರಾ ಅನ್ಕೊಂಡ್ರಾ? ಇಲ್ಲ, ಸಾಮಾನ್ಯವಾಗಿ ಜಾತ್ರೆ, ಹಬ್ಬಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಯುತ್ತವೆ. ಅದ್ರಲ್ಲೂ ಮೈಸೂರು ದಸರಾ ತುಂಬಾನೇ ಜನಪ್ರಿಯ. ನಾಡಹಬ್ಬದ ಕುಸ್ತಿ ಪಂದ್ಯಾವಳಿ ಗೆಲ್ಲಬೇಕು ಎನ್ನುವುದು ಪ್ರತಿ ಕುಸ್ತಿಪಟುವಿನ ಕನಸಾಗಿರುತ್ತದೆ. ಈ ಪಂದ್ಯಾವಳಿಯ ಝಲಕ್ ಪೈಲ್ವಾನ್ನಲ್ಲಿಯೂ ಇರಲಿದೆ. ಕಿಚ್ಚ ಸುದೀಪ್, ಉತ್ತರ ಭಾರತದ ನಟ ಸುಶಾಂತ್ ಸಿಂಗ್ ಜೊತೆಗೆ ಸೆಣಸಾಡುವ ದೃಶ್ಯ ಇದೆ ಎಂದು ತಿಳಿದುಬಂದಿದೆ. ಆದ್ದರಿಂದ ಮೈಸೂರು ದಸರಾದಲ್ಲೂ ಸುದೀಪ್ ಸೆಣೆಸಿದ್ದಾರೆ ಎಂದಿದ್ದು..!