ಮೈಸೂರು ದಸರಾ ದೀಪಾಲಂಕಾರಕ್ಕೆ ವಿರೋಧ!

0
41

ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಜಗಮಗಿಸುವ ಉದ್ದೇಶದಿಂದ ಮರಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ಇದರಿಂದ ಪಕ್ಷಿ, ಕೀಟಗಳಿಗೆ ಗಂಡಾಂತರ ಎದುರಾಗಿದೆ.

ಸಾಮಾನ್ಯವಾಗಿ ದಸರಾ ವೇಳೆ 100 ಕಿ. ಮೀ. ವರೆಗೆ ನಗರದ ಪ್ರಮುಖ ರಸ್ತೆ, ವೃತ್ತ, ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. ಆದರೆ ಹೀಗೆ ಮಾಡುವ ಸಮಯದಲ್ಲಿ ರಸ್ತೆ ಬದಿಯ ಮರಗಳಿಗೂ ಮೊಳೆ ಹೊಡೆದು ಸೀರಿಯಲ್ ಸೆಟ್ ಬಿಡಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲಾಡಳಿತದ ಈ ಕ್ರಮಕ್ಕೆ ಪರಿಸರ ಪ್ರೇಮಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಮರಗಳನ್ನು ಬಿಟ್ಟು ರಸ್ತೆಗಳಿಗೆ, ವೃತ್ತ, ಕಟ್ಟಡಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಿ. ಆದರೆ, ನಮ್ಮ ಸಂತೋಷಕ್ಕೆ ಪಕ್ಷಿ, ಕೀಟಗಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

“ರಾತ್ರಿ ವೇಳೆ ಹಕ್ಕಿಗಳು ವಿಶ್ರಾಂತಿ ಬಯಸುತ್ತವೆ. ಹೀಗಿರುವಾಗ ಮರಗಳಿಗೆ ವಿದ್ಯುತ್ ಅಲಂಕಾರ ಮಾಡಿದರೆ ಹಕ್ಕಿಗಳು ಮತ್ತು ಅವುಗಳ ಸಂತಾನೋತ್ಪತಿಗೂ ತೊಂದರೆ ಉಂಟಾಗುತ್ತದೆ. ಕೆಲವು ಮರಗಳು ರಾತ್ರಿ ವೇಳೆ ಆಮ್ಲಜನಕ ಹೊರ ಚೆಲ್ಲುತ್ತವೆ. ಹೀಗಾಗಿ ಇದು ಪಕ್ಷಿ ಮತ್ತು ಮರ ಎರಡಕ್ಕೂ ಹಾನಿ ಉಂಟು ಮಾಡುತ್ತದೆ” ಎನ್ನುತ್ತಾರೆ ಪಕ್ಷಿ ತಜ್ಞರಾದ ರಾಜ್‌ ಕುಮಾರ್.

LEAVE A REPLY

Please enter your comment!
Please enter your name here