ಮೈ ಜುಮ್ಮೆನ್ನಿಸುವ ಸ್ಥಳಗಳಿವು..!

0
130

ವಿಶ್ವದಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ನೀವು ಕೆಲವು ಸ್ಥಳಗಳನ್ನು ಬಹುಶಃ ನೋಡಿರಲ್ಲ. ಅಂತಾ ಕೆಲವು ಸ್ಥಳಗಳು ನಮ್ಮ ಗೋವಾದಲ್ಲೇ ಇವೆ..! ಅವುಗಳ ಕಿರು ಪರಿಚಯ ಇಲ್ಲಿದೆ.

ಇಗೋರ್‌ಶೆಮ್ ಬಾಂದ್ : ಗೋವಾದ ಈ ಪ್ರೇದೇಶದಲ್ಲೊಂದು ಹಳೆಯದಾದ ಚರ್ಚ್ ಇದೆ. ಆ ಚರ್ಚ್​​​​​ ಹಿಂಬದಿ ರಸ್ತೆಯಲ್ಲಿ ಮಧ್ಯಾಹ್ನ 2 ರಿಂದ 3 ಗಂಟೆ ವೇಳೆ ಹೆಚ್ಚಾಗಿ ದೆವ್ವಗಳು ಓಡಾಡುವುದು ಕಾಣುತ್ತವಂತೆ..! ಈ ರಸ್ತೆಯಲ್ಲಿ ಸಂಚಾರ ಮಾಡುವವರೂ ಇದ್ದಕ್ಕಿದ್ದಂತೆ ಮೈ ಮೇಲೆ ದೆವ್ವ ಬಂದವರಂತೆ ಮಾಡುತ್ತಾರೆ. ಆಡುತ್ತಾರೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ… ಇನ್ನು ಹೀಗಿರುವಾಗ ರಾತ್ರಿ ಕಥೆಯನ್ನು ನೀವೇ ಊಹಿಸಿಕೊಳ್ಳಿ.

ಬೆತಕೋಲ್ ರಸ್ತೆ : ಈ ರಸ್ತೆ ಸದಾ ತಂಪಾಗಿರುತ್ತದೆ. ಈ ರಸ್ತೆಯಲ್ಲಿಯಲ್ಲಿಯೂ ಅಗೋಚರವೊಂದು ನಡೆಯುತಗ್ತದೆಯಂತೆ…! ಇಲ್ಲೊಬ್ಬ ಪುಟ್ಟ ಬಾಲಕ ರಸ್ತೆಯ ನಡುವೆಯೇ ನಿಂತು ಕಿರುಚುತ್ತಾ, ಅಳುತ್ತಿರುತ್ತಾನಂತೆ! ಅಯ್ಯೋ ಏನಾಯಿತು ಎಂದು ವಿಚಾರಿಸುವ ವೇಳೆಗೆ ಹೋದವರಿಗೆ ಆ್ಯಕ್ಸಿಡೆಂಟ್​ ಆಗುತ್ತದೆಯಂತೆ. ಈಗಲೂ ಈ ಬಗ್ಗೆ ತನಿಖೆ ನಡೆಯುತ್ತಲೇ ಇದ್ದು, ನಿಗೂಢವಾಗಿದೆಯಂತೆ..!

ಸಲಿಗೋ ವಿಲೇಜ್ : ಚರ್ಚ್‌ಗಳಿಗೆ ಫೇಮಸ್ ಆಗಿರುವ ಜಾಗವಿದು. ಈ ಪ್ರದೇಶದಲ್ಲಿ ದೊಡ್ಡ ಆಲದ ಮರವಿದ್ದು, ಅದರ ಬಳಿ ಕ್ರಿಸ್ಟಲಿನಾ ಎಂಬ ಆತ್ಮ ಇಡೀ ಗ್ರಾಮವನ್ನೇ ಕಾಡುತ್ತದೆಯಂತೆ. ಅಷ್ಟೇ ಅಲ್ಲದೇ ರಾತ್ರಿ ಹೊತ್ತಿನಲ್ಲಿ ಮರದ ಸುತ್ತ ಇದನ್ನು ಯಾರೇ ನೋಡಿದರೂ ಅವರಿಗೆ ಗಾಯಗಳಾಗೋದು ಸಾಮಾನ್ಯವಂತೆ.

NH-17 ಮುಂಬೈ- ಗೋವಾ ಹೆದ್ದಾರಿ : ರಾಷ್ಟ್ರದಲ್ಲಿ ಅತೀ ಹೆಚ್ಚು ಅಪಘಾತಗಳಾಗುವ ಹೆದ್ದಾರಿಯಲ್ಲಿ NH-17 ಮುಂಬೈ- ಗೋವಾ ಹೆದ್ದಾರಿ ಕೂಡ ಒಂದು. ಈ ದಾರಿಯಲ್ಲಿ ಮಧ್ಯಾಹ್ನ 12 ಗಂಟೆ ನಂತರ ಮಾಂಸವನ್ನು ಕೊಂಡೊಯ್ಯುವಂತಿಲ್ಲವಂತೆ..! ಅಪ್ಪಿ ತಪ್ಪಿ ಈ ರಸ್ತೆಯಲ್ಲಿ ಆ ವೇಳೆಯಲ್ಲಿ ಮಾಂಸವನ್ನು ಕೊಂಡೋಯ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮಾತು ಅಲ್ಲಿನ ಜನರದ್ದು..!

ಡಿ ಮೆಲ್ಲೋ ಮನೆ: ಸ್ಯಾಂಟೆಮಾಲ್ ಪ್ರದೇಶದಲ್ಲಿರುವ ಹಳೆ ಬಂಗಲೆಡಿ ಮೆಲ್ಲೋ ಮನೆ. ಇಲ್ಲಿ ರಾತ್ರಿ ಸಮಯದಲ್ಲಿ ಮನೆಯಿಂದ ಮಹಿಳೆಯೊಬ್ಬಳು ಕಿರುಚಾಡುವುದು ಹಾಗೂ ಕಿಟಕಿ ಬಾಗಿಲು ಬಡಿಯುವ ಶಬ್ಧ ಕೇಳಿಸುತ್ತದೆ. ಈ ಬಂಗಲೆಯಲ್ಲಿ ಸಹೋದರರಿಬ್ಬರು ವಾಸವಿದ್ದು, ಆಸ್ತಿ ವಿಷಯಕ್ಕೆ ಜಗಳವಾಡಿ ಸತ್ತಿದ್ದಾರೆ. ಈ ಮನೆ ಮಾರಾಟ ಮಾಡುವ ಯತ್ನವೂ ವಿಫಲವಾಗಿದೆ ಎನ್ನುವುದು ಜನರ ಮಾತು..!

ಆ ಊರಿನಲ್ಲಿ ಎಲ್ಲಾ ಸೌಲಭ್ಯಗಳಿವೆ. ವಿದ್ಯುತ್, ನೀರು, ವಸತಿ ಸೇರಿದಂತೆ ಮನುಷ್ಯನ ಜೀವನ ನಡೆಸಲು ಏನೇನು ಬೇಕೋ ಎಲ್ಲಾ ಅಲ್ಲಿವೆ. ಅಲ್ಲದೇ ಆ ಊರಿನ ಜನರೂ ಕೂಡಾ ಸುಖ ಸಂತೋಷದಿಂದ ಬದುಕುತ್ತಿದ್ದಾರೆ. ಆದರೆ ಅವರೆಲ್ಲಾ ವಾಸಿಸುತ್ತಿರುವುದು ಮಾತ್ರ ಮಣ್ಣಿನಲ್ಲಿ..!
ಯೆಸ್.. ಆಸ್ಟ್ರೇಲಿಯಾದ ಅಡಿಲೇಡ್ ನಿಂದ 840 ಕಿಲೋ ಮೀಟರ್ ದೂರದಲ್ಲಿರುವ ಈ ಊಡಿನ ಹೆಸರು ಕೂಬರ್ ಪ್ಯಾಡಿ..! ಈ ಊರು ಒಂದು ಕಾಲದಲ್ಲಿ ಗಣಿ ಪ್ರದೇಶವಾಗಿತ್ತಂತೆ. ಕಾಲಕ್ರಮೇಣ ಜನವಸತಿ ಪ್ರದೇಶವಾಗಿ ಬದಲಾಗಿದೆ. ಈಗ ಈ ಗ್ರಾಮದಲ್ಲಿ 3500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಚರ್ಚ್, ಮ್ಯೂಸಿಯಂ, ಆರ್ಟ್ ಗ್ಯಾಲರಿಗಳು, ಹೋಟೆಲ್ ಗಳು ಇವೆ. ಇನ್ನೂ ಇಲ್ಲಿನ ಮನೆಗಳಲ್ಲಿ ಬಹುತೇಕ ಎಲ್ಲಾ ಆಧುನಿಕ ಸೌಲಭ್ಯಗಳಿವೆ. ಟಿವಿ, ಎಸಿ, ಆಧುನಿಕ ಕಿಚನ್ ಸೇರಿದಂತೆ ಹತ್ತಾರು ಸೌಲಭ್ಯಗಳು ಇಲ್ಲಿನ ಜನರಿಗೆ ದೊರೆಯುತ್ತಿವೆ. ಆದರೆ ಇಲ್ಲಿಗೆ ನೀರನ್ನು ಮಾತ್ರ 24 ಕಿಲೋ ಮೀಟರ್ ದೂರದಿಂದ ಭೂಗತ ಮಾರ್ಗದ ಮೂಲಕವೇ ಪೋರೈಸಲಾಗುತ್ತದೆ.
ಕೂಬರ್ ಪಾಡಿಯ ಹವಾಮಾನವೇ ಒಂದು ವಿಚಿತ್ರ. ಏಕೆಂದರೆ ಇಲ್ಲಿ ಹಗಲು ಹೊತ್ತಿನಲ್ಲಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೆ, ರಾತ್ರಿ ವೇಳೆ ಸೊನ್ನೆ ಡಿಗ್ರಿಗೆ ಕುಸಿಯುತ್ತದೆ. ಇಲ್ಲಿನ ಜನ ಈ ಹವಾಮಾನಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರಿಗೆ ಮಾತ್ರ ಸ್ವಲ್ಪ ತೊಂದರೆ ಎನಿಸುತ್ತದೆ.
ಕೂಬರ್ ಪ್ಯಾಡಿಯಲ್ಲಿ ಪ್ರತಿ ವರ್ಷ ಹಲವಾರು ಉತ್ಸವಗಳು ನಡೆಯುತ್ತವೆ. ಮೈನರಲ್ ರೇಸ್, ಮುರುಭೂಮಿ ಫೆಸ್ಟಿವಲ್ ಮತ್ತು ಓಪಲ್ ಫೆಸ್ಟಿವಲ್ ಗಳು ನಡೆಯುತ್ತವೆ. ಇನ್ನು ಎಲ್ಲಾ ವಯೋಮಾನದ ಜನರಿಗೂ ವಿವಿಧ ಮಾದರಿಯ ಕ್ರೀಡಾಕೂಟಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ಈ ವೇಳೆ ಅಪಾರ ಪ್ರಮಾಣದ ಪ್ರವಾಸಿಗರು ಆಗಮಿಸುತ್ತಾರೆ.
ಸಿನಿಮಾ ನಿರ್ದೇಶಕರ ಪಾಲಿಗೆ ಕೂಬರ್ ಪ್ಯಾಡಿ ಹೇಳಿ ಮಾಡಿಸಿದಂತಹ ತಾಣ. ಆದ್ದರಿಂದ ಇಲ್ಲಿ ಹತ್ತಾರು ಸಿನಿಮಾಗಳ ಶೂಟಿಂಗ್ ನಡೆದಿದೆ. ಫೈರ್ ಇನ್ ದ ಸ್ಟೋನ್, ಪಿಚ್ ಬ್ಲ್ಯಾಕ್, ರೆಡ್ ಪ್ಲ್ಯಾನೆಟ್ ಚಿತ್ರಗಳು ಅವುಗಳಲ್ಲಿ ಪ್ರಮುಖವಾದವು.
ಕೂಬರ್ ಪ್ಯಾಡಿ ಜನರ ಪ್ರಮುಖ ಆದಾಯವೆಂದರೆ ಪ್ರವಾಸೋದ್ಯಮ. ಅದೇ ಹೆಚ್ಚಿನ ಜನರ ಆದಾಯದ ಮೂಲವಾಗಿದೆ. ಆದ್ದರಿಂದ ಇಲ್ಲಿನ ಜನ ಸುಖ ಸಂತೋಷದಿಂದ ಬದುಕುತ್ತಿದ್ದಾರೆ. ಅಂತಹ ಜೀವನ ಎಲ್ಲರಿಗೂ ಸಿಕ್ಕರೆ ಹೇಗಿರುತ್ತದೆ ಅಲ್ಲವೇ..?

1.

house

2.

house-4

3.

1411916238331_Image_galleryImage_C1H0DF_Australia_South_Au

ಟೀಚರ್ ಆಗ್ಬೇಕಾದವ್ರು ಲೋಕೋ ಪೈಲಟ್ ಆದ್ರು..!

ಸುರೇಖಾ ಯಾದವ್. ಭಾರತದ ಪ್ರಥಮ ಲೋಕೋ ಪೈಲಟ್. ಮೂವತ್ತು ವರ್ಷಗಳ ಹಿಂದೆ ಇಂಡಿಯನ್ ರೈಲ್ವೆಯಲ್ಲಿ ಲೋಕೋ ಪೈಲಟ್ ಆಗಿ ಕಾರ್ಯಾರಂಭ ಮಾಡಿದ್ರು. ಇವರ ಸಾಧನೆಯೇ ಉಳಿದೆಲ್ಲ ಮಹಿಳಾ ಲೋಕೋ ಪೈಲಟ್ಗಳಿಗೂ ಸ್ಫೂರ್ತಿ ಅಂದ್ರೆ ಖಂಡಿತ ತಪ್ಪಲ್ಲ.
ಮಹಾರಾಷ್ಟ್ರದ ಸತಾರಾದಲ್ಲಿ ಜನಿಸಿದ ಇವರು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರೆ. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಮುಂದಿದ್ರು. ಇವರು ಬದುಕಿನ ಕನಸು ಕಟ್ಟಿದ್ದು ತಾನೋರ್ವ ಟೀಚರ್ ಆಗಬೇಕು ಎಂದು. ಆದರೆ, ಹಣೆಬರಹದಲ್ಲಿ ದೇವರು ಅವರಿಗೆ ಬೇರೆಯೇ ಉದ್ಯೋಗ ಬರೆದಿದ್ದ. ಅದರಂತೆ 1987 ರಲ್ಲಿ ರೈಲ್ವೇ ಪರೀಕ್ಷೆಗಳನ್ನು ಎದುರಿಸಿದ್ರು. ಇವರು ಉತ್ತೀರ್ಣರಾಗಿ ರೈಲ್ವೇ ಇಲಾಖೆಯಲ್ಲಿ ಲೋಕೋ ಪೈಲಟ್ಆಗಿ ನೇಮಕಗೊಳ್ಳುತ್ತಾರೆ.


ನಿಮಗೂ ತಿಳಿದಿರುವಂತೆ ಹೆಣ್ಣು ಮಕ್ಕಳು ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೂ, ಅನೇಕ ಸವಾಲುಗಳ ನಡುವೆ, ಸುಮಾರು ಮೂವತ್ತು ವರ್ಷ ಇವರು ಕಳೆದದ್ದು ಅಚ್ಚರಿಯೇ ಸರಿ. ಗೂಡ್ಸ್ ರೈಲು, ಪ್ಯಾಸೆಂಜರ್ ರೈಲುಗಳಿಗೆ ಚಾಲಕಿಯಾಗಿ, ತನ್ನ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ.


ಇವರ ಇನ್ನೊಂದು ಹಿರಿಮೆ ಎಂದರೆ 2010 ರಲ್ಲಿ ಪುರುಷರಿಗೇ ಸವಾಲಾಗಿರುವ ಘಾಟ್ ರೈಲ್ವೆಯಲ್ಲಿ ಕಾರ್ಯ ನಿರ್ವಹಿಸಿರುವುದು. ಈ ಜವಾಬ್ದಾರಿಯನ್ನು ಸುರೇಖಾ ವಹಿಸುವ ಮುನ್ನ ಓರ್ವ ಮಹಿಳೆ ಇದನ್ನು ಸಮರ್ಥವಾಗಿ ನಿರ್ವಹಿಸುವುದು ಸಾಧ್ಯವೇ ಎಂಬ ಪ್ರಶ್ನೆ ಅಧಿಕಾರಿಗಳಲ್ಲಿತ್ತು. ಆದರೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಭೇಷ್ಎನ್ನಿಸಿಕೊಂಡರು. ಅಲ್ಲದೇ 2000ರಲ್ಲಿ ಮಮತಾ ಬ್ಯಾನರ್ಜಿ ಉದ್ಘಾಟಿಸಿದ ಲೇಡಿ ಸ್ಸ್ಪೆಷಲ್ ಟ್ರೈನಿನ ಮೊದಲ ಚಾಲಕಿಯಾದ ಹೆಮ್ಮೆಯೂ ಇವರಿಗಿದೆ.
ಇನ್ನು ಸುರೇಖಾ ಅವರಿಗೆ 2011ರ ಮಹಿಳಾ ದಿನದಂದು ಏಷ್ಯಾದ ಮೊದಲ ರೈಲು ಚಾಲಕಿ ಎಂಬ ಬಿರುದನ್ನೂ ನೀಡಲಾಗಿದೆ. 2011ರಲ್ಲಿ ಇವರಿಗೆ ಉನ್ನತ ಹುದ್ದೆಗೆ ಬಡ್ತಿಯೂ ಸಿಕ್ಕಿದೆ. ಅಲ್ಲದೆ, ಇವರೀಗ ರೈಲು ಚಾಲನೆಗೆ ಸಂಬಂಧಿಸಿದಂತೆ ಟ್ರೈನಿಂಗ್ ನೀಡುತ್ತಿದ್ದು, ತನ್ನ ಬಾಲ್ಯದ ಟೀಚರ್ ಕನಸನ್ನು ಈ ಮೂಲಕ ನೆರವೇರಿಸಿಕೊಂಡಿದ್ದಾರೆ. ಇವರಿಂದ ಸ್ಫೂರ್ತಿಗೊಂಡು ಸದ್ಯ ಭಾರತೀಯ ರೈಲ್ವೇಯಲ್ಲಿ ಸುಮಾರು 50ಕ್ಕೂ ಅಧಿಕ ಮಹಿಳಾ ಲೋಕೋ ಪೈಲಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುರೇಖಾ ಯಾದವ್ ಅವರು ಸಾಧನೆ ಮಾಡುವ ಹಂಬಲ ಇದ್ದರೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟು, ಸಾಧನೆಯ ಕನಸು ಹೊತ್ತವರಿಗೂ ಮಾದರಿಗಳಾಗಿದ್ದಾರೆ.

ಟಾಸ್ ಗೆದ್ದ SRH ಬೌಲಿಂಗ್ ಆಯ್ಕೆ..!

ಅಬುಧಾಬಿ : 13 ನೇ ಆವೃತ್ತಿ IPLನ ಇಂದಿನ ಮೊದಲ‌ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ ಆರ್ ಹೆಚ್ ಕೆಕೆಆರ್ ಗೆ ಬ್ಯಾಟಿಂಗ್ ನೀಡಿದೆ.

ಕೆಕೆಆರ್ : ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಐಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲ್ದೀಪ್ ಯಾದವ್, ಲಾಕಿ ಫರ್ಗ್ಯೂಸನ್, ವರುಣ್ ಚಕ್ರವರ್ತಿ.

ಎಸ್‌ಆರ್‌ಎಚ್‌ XI : : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ಬಸಿಲ್ ಥಂಪಿ.

PDF ಫೈಲ್ ಗೆ  ಸಹಿ ಮಾಡೋದು ಹೇಗೆ?

ಇಮೇಲ್‌ ಮೂಲಕ ಸ್ವೀಕರಿಸುವ ದಾಖಲೆಗಳ ಮೇಲೆ ಸಹಿ ಹಾಕುವುದು ಹೊಸದೇನಲ್ಲ. ಇಡೀ ದೇಶ ಲಾಕ್ ಡೌನಿನಲ್ಲಿದ್ದಾಗ ಬಹಳಷ್ಟು ಜನ ಮನೆಯಿಂದಲೇ ಕೆಲಸ ಮಾಡುವಂತಾಗಿತ್ತು. ಈ ವೇಳೆ ಡಿಜಿಟಲ್ ಮೂಲಕವೇ ಸಹಿ ಮಾಡಿ ದಾಖಲೆಗಳನ್ನು ದೃಢೀಕರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಡೌನ್‌ಲೋಡ್ ಮಾಡುವುದು, ಪ್ರಿಂಟ್ ಮಾಡುವುದು, ಸಹಿ ಮಾಡಿ, ಸ್ಕ್ಯಾನ್ ಮಾಡಿ ಮತ್ತೆ ವಾಪಾಸ್ ಇ ಮೇಲ್ ಮಾಡುವುದು ದೊಡ್ಡ ಪ್ರಕ್ರಿಯೆ. ಇದು ಸ್ವಲ್ಪ ಹಳೆಯ ವಿಧಾನ ಮತ್ತು ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದಕ್ಕಿಂತ ವೇಗವಾಗಿ ಹಾಗೂ ಉತ್ತಮವಾಗಿ, ಸ್ಕ್ಯಾನ್ ಮತ್ತು ಪ್ರಿಂಟ್ ಮಾಡುವ ತೊಂದರೆ ಇಲ್ಲದ ಅವಕಾಶವಿದೆ. ಅದುವೇ ಇಲೆಕ್ಟ್ರಾನಿಕ್ ಸಹಿ. ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಸಿ ಇಲೆಕ್ಟ್ರಾನಿಕ್ ಸಹಿ ಮಾಡುವ ವಿಧಾನ..!

ಒಂದು ಬಿಳಿ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿ. ಅದನ್ನು ಸ್ಕ್ಯಾನ್ ಮಾಡಿ ನಿಮ್ಮ ಕಂಪ್ಯೂಟರಿನಲ್ಲಿ ಸೇವ್ ಮಾಡಿ. ನಿಮ್ಮ ಸಹಿಯನ್ನು ಡಿಜಿಟಲ್ ರೂಪಕ್ಕೆ ತರಲು ಈ ಸ್ಕ್ಯಾನ್ ಒಂದು ಸಲ ಮಾತ್ರ ಮಾಡಬೇಕಾದ್ದು. ನಂತರ ನೀವು ಸಹಿ ಮಾಡಬೇಕಾದ ದಾಖಲೆಯನ್ನು ವರ್ಡ್ ಪ್ರೊಸೆಸರ್ ಅಥವಾ ಇಮೇಜ್ ಎಡಿಟರ್‌ನಲ್ಲಿ ತೆರೆದು, ನಿಮ್ಮ ಸಹಿಯನ್ನು ಬೇಕಾದ ಜಾಗದಲ್ಲಿ ಪೇಸ್ಟ್ ಮಾಡಬಹುದು.

ನೀವು ಸ್ವೀಕರಿಸಿದ ದಾಖಲೆಯನ್ನು ಅಡೋಬ್ ರೀಡರ್ ಮೂಲಕ ಓಪನ್ ಮಾಡಿ.
ಬಲ ಭಾಗದ ಪಟ್ಟಿಯಲ್ಲಿರುವ ಫೈಲ್ ಮತ್ತು ಸೈನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಟೂಲ್ ಬಾರಿನಲ್ಲಿರುವ ಸೈನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಸಹಿ ಸೇರಿಸುವ ಆಪ್ಷನ್ ಅನ್ನು ಆಯ್ಕೆ ಮಾಡಿ.
ಈಗ ಅಡೋಬ್ ರೀಡರ್ ಡಿಸಿ ನಿಮಗೆ ಸಹಿ ಮಾಡಲು ಮೂರು ಆಯ್ಕೆಗಳನ್ನು ನೀಡುತ್ತದೆ.

ಅಡೋಬ್‌ ಆಟೋಮ್ಯಾಟಿಕ್ ಸಿಗ್ನೇಚರ್ ಕನ್ವರ್ಟರ್ ಬಳಸಿ – ನಿಮ್ಮ ಹೆಸರನ್ನು ಟೈಪ್ ಮಾಡಿದರೆ, ಅಡೋಬ್ ಅದನ್ನು ಸಹಿಯಾಗಿ ಬದಲಾಯಿಸುತ್ತದೆ. ಆದರಿದು ನಿಮ್ಮ ಸ್ವಂತ ಸಹಿಯಂತೆ ಇರುವುದಿಲ್ಲ.

ಚಿತ್ರಿಸಿ – ಟ್ರ್ಯಾಕ್ ಪ್ಯಾಡ್, ಮೌಸ್ ಅಥವಾ ಟಚ್ ಸ್ಕ್ರೀನ್ ಬಳಸಿ ನಿಮ್ಮ ಸಹಿ ಮಾಡಬಹುದು.
ಆಮದು ಮಾಡಿ – ನಿಮ್ಮ ಸಹಿಯನ್ನು ಆಮದು ಮಾಡಿಕೊಂಡು ಬೇಕಾದಲ್ಲಿ ಸೇರಿಸಬಹುದು.

LEAVE A REPLY

Please enter your comment!
Please enter your name here