ಉಪ ಚುನಾವಣೆ ಆದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದು ರೀತಿ ಕುಗ್ಗಿದ ರೀತಿ ಆಗಿದ್ದು ಅದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೂಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಆಗ ಅವರನ್ನು ನೋಡಲು ಅನರ್ಹರೆಂದು ಹೇಳಿಕೊಂಡು ಬಿಜೆಪಿಗೆ ಸೇರಿದಂತಹ ಶಾಸಕರುಗಳು ಮತ್ತೆ ತಮ್ಮ ಪಕ್ಷದ ಹಿರಿಯರು ಹಾಗೂ ತಮ್ಮ ಗುರುಗಳು ಎಂ ಅವರಿಗೆ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಅವರನ್ನು ನೋಡಲು ಬಂದಿದ್ದರೂ ಈ ವಿಚಾರದ ಬಗ್ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಪಕ್ಷ ಬಿಟ್ಟು ಹೋದವರು ಇವಾಗ ಸಿದ್ದರಾಮಯ್ಯ ಅವರನ್ನು ಮಾತನಾಡಿಸುವ ನೆಪದಲ್ಲಿ ನಮ್ಮ ಗುರು ಎಂದು ಹೇಳುತ್ತಿದ್ದಾರೆ. ಮೊದಲು ಆ ಗುರುವಿಗೆ ಟೋಪಿ ಹಾಕಿ ಈಗ ಮತ್ತೆ ನಮ್ಮ ಗುರು ಎನ್ನುತ್ತಿದ್ದಾರೆ ಎಂದು ಪಕ್ಷ ಬಿಟ್ಟು ಹೋದ ಶಾಸಕರಿಗೆ ಟೀಕೆ ಮಾಡಿದ್ದಾರೆ .
ತಮ್ಮ ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿದಾಗ ಆಯಾಯ ಪಕ್ಷದ ಮುಖಂಡರು ಕರೆದರೂ ಮಾತುಕತೆಗೆ ಬಂದಿರಲಿಲ್ಲ ಅನರ್ಹ ಶಾಸಕರು. ಆದರೆ ಇದೀಗ ಸಿದ್ದರಾಮಯ್ಯ ಆಸ್ಪತ್ರೆಗೆ ಸೇರಿದ್ದರು ಎಂಬ ಕಾರಣಕ್ಕೆ ಮಾತನಾಡಿಸಲು ನಾ ಮುಂದು ತಾ ಮುಂದು ಎಂದು ಹೋಗುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ ಎನ್ನಲಾಗುತ್ತಿದೆ .