ಮೊದಲ IPL ಪಂದ್ಯದಲ್ಲೆ ಅಬ್ಬರಿಸುತ್ತಿದ್ದಾರೆ ಹೈದರಾಬಾದ್ ಆಟಗಾರರು..!?

Date:

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರು ಹೊಸ ಉತ್ಸಾಹದಿಂದ ತಮ್ಮ ತಮ್ಮ ತಂಡವನ್ನು ಸೇರಿದ್ದಾರೆ.

ಭಾನುವಾರದಂದು ಜೈಪುರಕ್ಕೆ ಆಗಮಿಸಿ, ರಾಜಸ್ಥಾನ ರಾಯಲ್ಸ್ ತಂಡದ ಶಿಬಿರವನ್ನು ಸ್ಮಿತ್ ಸೇರಿದರು. .ಸನ್​ರೈಸರ್ಸ್ ಎ ತಂಡದ ಪರವಾಗಿ ಆಡಿದ ವಾರ್ನರ್ ಅವರು ಸನ್​ರೈಸರ್ಸ್ ಬಿ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 43 ಎಸೆತಗಳಲ್ಲಿ 65 ರನ್ ಬಾರಿಸಿದರು. ಇದೇ ವೇಳೆ ಯೂಸುಫ್ ಪಠಾಣ್ ಅವರು 30 ಎಸೆತಗಳಲ್ಲಿ 68 ರನ್ ಗಳಿಸಿ ಅಬ್ಬರಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣ ನಡೆದಿತ್ತು.

ಇದರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಸಿಕ್ಕಿಬಿದ್ದು ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಕಳೆದ ವರ್ಷ ಮಾರ್ಚ್ 28ರಂದು ಮೂವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು. ಹೈದರಾಬಾದಿಗೆ ಮರಳಿ, ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವುದು ಸಂತಸ ತಂದಿದೆ.

ಕಳೆದ 12 ವರ್ಷಗಳಿಂದ ಅಭಿಮಾನಿಗಳು, ಫ್ರಾಂಚೈಸಿಗಳು ನೀಡಿರುವ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ’ ಎಂದು ವಾರ್ನರ್ ಅವರು ಹೇಳಿದರು. ಮಾರ್ಚ್ 24ರಂದು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಈಡೆನ್ ಗಾರ್ಡನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಮೊದಲ ಪಂದ್ಯವನ್ನಾಡಲಿದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿ: ಕಾಂಗ್ರೆಸ್ ಕುಟುಂಬದವರನ್ನು...

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ ಬೆಳಗಾವಿ: ಉತ್ತರಕನ್ನಡ...

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ...

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ....