ಸಂಕ್ರಾಂತಿ ಹಬ್ಬದ ಪ್ರಯುಕ್ತ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಚಿತ್ರ ಬಿಡುಗಡೆಯಾಗಿತ್ತು. ಒಂದು ವರ್ಷದ ಹಿಂದಿನಿಂದಲೂ ಸಹ ದೊಡ್ಡಮಟ್ಟದ ಕ್ರೇಜ್ ಹುಟ್ಟುಹಾಕಿದ ಈ ಚಿತ್ರ ಕೊರೋನಾ ವೈರಸ್ ಹಾವಳಿಯ ನಂತರ ಬಿಡುಗಡೆಯಾಗಿ ಅತಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತು. ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರದಲ್ಲಿ ಸ್ಥಾನ ಎಂಬ ನೀತಿಯ ನಡುವೆಯೂ ಮಾಸ್ಟರ್ ದಾಖಲೆಯನ್ನ ಬರೆದು 100 ಕೋಟಿ ಕ್ಲಬ್ ಸೇರಿದೆ.
ಇನ್ನು ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿರುವ ಮಾಸ್ಟರ್ ಇದೀಗ ಓಟಿಟಿ ಗೆ ಲಗ್ಗೆ ಇಡುತ್ತಿದೆ. ಹೌದು ಮಾಸ್ಟರ್ ಸಿನಿಮಾ ಫೆಬ್ರವರಿ 12 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ದಾಖಲೆಯ ಮೊತ್ತ ಕೊಟ್ಟು ಮಾಸ್ಟರ್ ಚಿತ್ರವನ್ನು ಖರೀದಿಸಿರುವ ಅಮೆಜಾನ್ ಪ್ರೈಮ್ ಫೆಬ್ರವರಿ 12 ರಂದು ಮಾಸ್ಟರ್ ಸಿನಿಮಾವನ್ನು ಪ್ರೈಮ್ ವಿಡಿಯೋಸ್ ನಲ್ಲಿ ಬಿಡುಗಡೆ ಮಾಡಲಿದೆ.