ತಂಗಿಯ ಗಂಡ ವಾದ್ರಾ ವಿರುದ್ಧ ತಿರುಗಿಬಿದ್ದ ರಾಹುಲ್ ಗಾಂಧಿ..!

Date:

ಚುನಾವಣಾ ಪ್ರಚಾರದ ಅಂಗವಾಗಿ ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಜೊತೆ ಬುಧವಾರ ಸಂವಾದ ನಡೆಸುತ್ತಿದ್ದಾಗ ಅವರಿಗೆ ತಮ್ಮ ಭಾವ ರಾಬರ್ಟ್ ವಾದ್ರಾ ಅವರ ಅಕ್ರಮ ವ್ಯವಹಾರಗಳ ಕುರಿತು ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ರಾಹುಲ್, ‘ಈ ಮಾತನ್ನು ಹೇಳುತ್ತಿರುವ ಮೊದಲ ವ್ಯಕ್ತಿ ನಾನು… ರಾಬರ್ಟ್ ವಾದ್ರಾ ಅವರನ್ನು ತನಿಖೆಗೊಳಪಡಿಸಿ. ಹಾಗೇ ಪ್ರಧಾನಿ ಮೋದಿಯವರನ್ನೂ ತನಿಖೆಗೊಳಪಡಿಸಿ.

ಮೋದಿ ಒಬ್ಬ ಭ್ರಷ್ಟ ವ್ಯಕ್ತಿ. ಅವರು ರಫೇಲ್ ವ್ಯವಹಾರದಲ್ಲಿ ತಮ್ಮ ಸ್ನೇಹಿತರಿಗೆ ಲಾಭ ಮಾಡಿಕೊಡಲು ಸರ್ಕಾರದ ಮೂಲಕ ನಡೆಸಬೇಕಿದ್ದ ಚೌಕಾಸಿಯನ್ನು ಬೈಪಾಸ್ ಮಾಡಿ ಖಾಸಗಿಯಾಗಿ ಚೌಕಾಸಿ ವ್ಯವಹಾರ ನಡೆಸಿದ್ದರು’ ಎಂದು ಹೇಳಿದರು.

ಜೈಷ್ ಉಗ್ರನನ್ನು ಮಸೂದ್ ಅಜರ್ ಜೀ ಎಂದು ಕರೆದು ವಿವಾದ ಸೃಷ್ಟಿಸಿದ್ದ ರಾಹುಲ್ ವಿರುದ್ಧ ರಾಜು ಮಹಾಂತಾ ಎನ್ನುವವರು ದೇಶದ್ರೋಹದ ಕೇಸು ದಾಖಲಿಸಿದ್ದಾರೆ. ಉಗ್ರನಿಗೆ ವಿಶೇಷ ಗೌರವ ನೀಡುವ ಮೂಲಕ ರಾಹುಲ್ ದೇಶ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಲಾಗಿದೆ.

 

Share post:

Subscribe

spot_imgspot_img

Popular

More like this
Related

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ ಬದಲಾವಣೆ! 

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ...

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ: ಡಿ.ಕೆ. ಶಿವಕುಮಾರ್

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ:...

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....