ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದ ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರ್ತಿತ್ತು ಹಾಗೂ ಇತ್ತೀಚೆಗೆ ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಅನರ್ಹ ಶಾಸಕರ ಕುರಿತಂತೆ ನೀಡಿದ ಹೇಳಿಕೆ ಕೂಡ ಅನರ್ಹ ಶಾಸಕರಿಗೆ ಗೊಂದಲವನ್ನು ಸೃಷ್ಟಿ ಮಾಡಿದ್ದು .
ಆದರೆ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಹುಬ್ಬಳ್ಳಿ ಸಭೆಯಲ್ಲಿ ಯಡಿಯೂರಪ್ಪನವರು ಆಡಿದ ಮಾತುಗಳ ಆಡಿಯೋ ಹಾಗೂ ವಿಡಿಯೋ ನಮ್ಮ ಬಳಿ ಲಭ್ಯವಿದೆ, ಇದನ್ನು ಈಗಾಗಲೇ ನಮ್ಮ ವಕೀಲರಿಗೆ ರವಾನಿಸಿದ್ದೇವೆ. ಇದು ಬಹು ದೊಡ್ಡ ಸಾಕ್ಷಿಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದಾರೆ .