ಯಡಿಯೂರಪ್ಪ ಆದೇಶ ಪ್ರಶ್ನಿಸಿ ಕೋರ್ಟ್ ಗೆ ಹೋದರೆ ಅಲೋಕ್ ಕುಮಾರ್..?

0
555

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದ ನೂತನ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್‌ ಇಲಾಖೆಗೆ ಮೇಜರ್ ಸರ್ಜರಿ ಆಗಿದ್ದು ‘ವರ್ಗಾವಣೆ ಪರ್ವ’ ಎಂದಿನಂತೆ ಮುಂದುವರೆದಿದೆ, ಶುಕ್ರವಾರ ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸೇರಿದಂತೆ ಒಟ್ಟು ಒಂಭತ್ತು ಜನ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆದರೆ ಸರ್ಕಾರದ ಈ ನಡೆಯಿಂದ ಬೇಸರಗೊಂಡು ತಮ್ಮನ್ನು ಅಲ್ಪಾವಧಿಯಲ್ಲೇ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದ ಆದೇಶವನ್ನು ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದೆ ಕಾರಣಕ್ಕಾಗಿಯೇ ಅವರು ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಿಗೆ ಅಧಿಕಾರ ಹಸ್ತಾಂತರ ಮಾಡುವ ವೇಳೆ ಗೈರಾಗಿದ್ದರು ಎಂಬ ವದಂತಿಗಳು ಕೂಡ ಕೇಳಿಬಂದಿದೆ. ಐಜಿಪಿ ಹುದ್ದೆಯಲ್ಲಿದ್ದ ಅಲೋಕ್‌ ಕುಮಾರ್‌ ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಆಯುಕ್ತರನ್ನಾಗಿ ಜೂ.17ರಂದು ಈ ಹಿಂದಿನ ಕುಮಾರಸ್ವಾಮಿಯವರ ಸರ್ಕಾರ ನೇಮಿಸಿತ್ತು.

LEAVE A REPLY

Please enter your comment!
Please enter your name here