ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಯಡಿಯೂರಪ್ಪ ಜ್ಯೋತಿಷ್ಯಿಗಳು ಹೇಳಿದಂತೆ ಕೇಳಿದ್ದಾರೆ. ತಮ್ಮ ಹೆಸ್ರಿನಲ್ಲಿ ಬದಲಾವಣೆ ಮಾಡಿದ್ದಾರೆ. ಇಂಗ್ಲೀಷ್ ಸ್ಪೆಲಿಂಗ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಹೆಸರಿನಲ್ಲಿ ಬರುವ ಎರಡು D ಬದಲು I ಸೇರಿಸಿದ್ದಾರೆ.
ಯಡಿಯೂರಪ್ಪ ಇಂಗ್ಲೀಷ್ ಸ್ಪೆಲಿಂಗ್ ಮೊದಲು B.S. Yeddyurappa ಎಂದಿತ್ತು. ಈಗ B.S. Yediyurappa ಆಗಿದೆ. 2007ರಲ್ಲಿ ಯಡಿಯೂರಪ್ಪ B.S. Yediyurappa ಬದಲು B.S. Yeddyurappa ಎಂದು ಹೆಸ್ರು ಬದಲಿಸಿಕೊಂಡಿದ್ದರು. ಈಗ ಮತ್ತೆ ಹಳೆ ಹೆಸ್ರಿಗೆ ಬಂದಿದ್ದಾರೆ.ಶುಕ್ರವಾರವೇ ಪ್ರಮಾಣ ವಚನ ಸ್ವೀಕರಿಸಿ ಎಂದು ಜ್ಯೋತಿಷ್ಯಿಗಳು ಹೇಳಿದ್ದರಂತೆ. ಅದ್ರಂತೆ ಯಡಿಯೂರಪ್ಪ ಇಂದೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.