ರಾಜ್ಯ ಸರ್ಕಾರ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ದಾನಿಗಳು ನೆರವು ನೀಡುವಂತೆ ಸಿಎಂ ಮನವಿ ಮಾಡಿದ್ದಾರೆ.10 ಕೋಟಿ ರೂ.ಗಿಂತ ಹೆಚ್ಚಿನ ನೆರವು ನೀಡುವ ಸಂಸ್ಥೆ, ಕಂಪನಿಗಳ ಹೆಸರನ್ನು ಗ್ರಾಮಕ್ಕೆ ಇಡುವುದಾಗಿ ಸಿಎಂ ಘೋಷಣೆ ಮಾಡಿದ್ದರು. ಆದರೆ, ಇದಕ್ಕೆ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಜೆಡಿಎಸ್ ಕೂಡ ವಿರೋಧ ವ್ಯಕ್ತಪಡಿಸಿ, 10 ಕೋಟಿ ರೂ. ದೇಣಿಗೆ ನೀಡಿದ ಕಂಪನಿಗಳ ಹೆಸರನ್ನು ಗ್ರಾಮಗಳಿಗೆ ಇಡುವ ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಧಾರ ತುಘಲಕ್ ನಿರ್ಧಾರದಂತೆ ಇದೆ ಎಂದು ಟೀಕಿಸಿದೆ. ಹೀಗಾಗಿ ಈ ಹೇಳಿಕೆಯನ್ನು ಯಡಿಯೂರಪ್ಪ ಅವರು ಹಿಂಪಡೆದಿದ್ದಾರೆ .