ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್ ಕನ್ನಡ ಚಿತ್ರರಂಗದ ತಾರಾ ಜೋಡಿ. ಒಂದೇ ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿ, ಬಳಿಕ ಒಂದೇ ಸಿನಿಮಾ ಮೂಲಕ (ಮೊಗ್ಗಿನ ಮನಸ್ಸು) ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ಇವರಿಬ್ಬರು ಪ್ರೀತಿಸಿ, ಮದ್ವೆಯಾಗಿದ್ದಾರೆ. ಈ ಮುದ್ದಾದ ಜೋಡಿಗೆ ಈಗ ಮುದ್ದಾದ ಮಗಳು ಕೂಡ ಇದ್ದಾಳೆ..!
ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಕೆಲವು ತಿಂಗಳ ಹಿಂದೆ ಅವರಿಬ್ಬರು ತಮ್ಮ ಮುದ್ದಾದ ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಗುವಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ‘YR’ ಎಂದು ಕರೆಯಿರಿ. ಎಂದು ಹೇಳಿದ್ದರು. ಆದರೆ, ಯಶ್-ರಾಧಿಕಾರ ಅಭಿಮಾನಿಗಳು ‘ಯಶಿಕಾ’ ಎಂದು ನಾಮಕಾರಣ ಮಾಡಿ ಅದೇ ಹೆಸರನಿಂದ ಕರೆಯುತ್ತಿದ್ದಾರೆ. ಈಗ ಆ ಮುದ್ದು ಮಗು ಯಶಿಕಾ ಎಂದೇ ಕರೆಯಲ್ಪಡುತ್ತಿದ್ದಾಳೆ. ಆದರೆ, ಯಶ್ ಮತ್ತು ರಾಧಿಕಾ ಯಶಿಕಾ ಎಂಬ ಹೆಸರು ಇಡಲ್ಲ. ಬೇರೆ ಹೆಸರನ್ನು ಇಡುತ್ತೇವೆ ಎಂದಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ಯಶಿಕಾ ಎಂದೇ ಕರೆಯುತ್ತಿದ್ದಾರೆ.
ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಶ್-ರಾಧಿಕಾರ ಆ ಮುದ್ದಾದ ಮಗುವಿಗೆ ಹೊಸ ಹೆಸರು ಇಟ್ಟಿದ್ದಾರೆ. ಹೌದು, ಆ ಮಗುವನ್ನು ನೋಡಿದ ದರ್ಶನ್ ‘ಬೆಣ್ಣೆ ಮುದ್ದೆ’ ಅಂತ ನಾಮಕರಣ ಮಾಡಿದ್ದಾರೆ. ಇವಳಿಗೆ ಬೆಣ್ಣೆ ಮುದ್ದೆ ಎನ್ನುವ ಹೆಸರೇ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಿ ದರ್ಶನ್ ಫ್ಯಾನ್ಸ್ ಯಶ್-ರಾಧಿಕಾರ ಮಗಳನ್ನು ಪ್ರೀತಿಯಿಂದ ‘ಬೆಣ್ಣೆ ಮುದ್ದೆ’ ಎನ್ನುವ ಹೆಸರಿನಿಂದ ಕರೆಯುತ್ತಿದ್ದಾರೆ. ಹೀಗಾಗಿ ಯಶ್-ರಾಧಿಕಾಳ ಮಗಳು YR ಅವರ ಫ್ಯಾನ್ಸ್ ಗೆ ಯಶಿಕಾ, ದರ್ಶನ್ ಫ್ಯಾನ್ಸ್ಗೆ ಬೆಣ್ಣೆಮುದ್ದೆ ಆಗಿದ್ದಾಳೆ.