ಮಾಜಿ ಸಿಎಂ ಸಿದ್ದರಾಮಯ್ಯ ಸಂಬಂಧಿಗಳೆಂದು ಹೇಳಿ ಲಕ್ಷಾಂತರ ಹಣ ವಂಚನೆ !?

Must read

ಮಾಜಿ ಸಿಎಂ ಸಿದ್ದರಾಮಯ್ಯನವರ ಸಂಬಂಧಿಗಳೆಂದು ಹೇಳಿಕೊಂಡು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೊಡ್ಡೆ ಅರೇಹಳ್ಳಿ ಗ್ರಾಮದ ಯುವಕರಿಗೆ ವಂಚನೆ ಮಾಡಲಾಗಿದೆ. ಹತ್ತು ಜನ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 60 ಲಕ್ಷ ರೂ.ಗಳ ವಂಚನೆ ಎಸಗಲಾಗಿದೆ.

ಮಂಡ್ಯ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ಮಹೇಶ್.ಬಿ.ಎಂ, ಬಿ.ಎಂ.ವಿಜಯಕುಮಾರ್, ಬಿ.ಎಂ.ನಟರಾಜ ಎಂಬುವವರಿಂದ ವಂಚನೆ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ.

ಮೂವರು ಸಹೋದರರು ಸೇರಿಕೊಂಡು ಲಕ್ಷಾಂತರ ಪಂಗನಾಮ ಹಾಕಿದ್ದಾರೆ. ಹಣ ಕಳೆದುಕೊಂಡ ಪೋಷಕರಿಂದ ಹಣ ವಾಪಸ್ಸು ಕೊಡಿಸುವಂತೆ ಮನವಿ ಮಾಡಲಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹ ಕೇಳಿಬರುತ್ತಿದೆ.

- Advertisement -spot_img

More articles

- Advertisement -spot_img

Latest article