ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನನ್ನ ಸ್ಥಾನದಲ್ಲಿ ನಾನು ಹೇಗೆ ವರ್ತಿಸಬೇಕು. ಜನರು ಏನು ನಿರೀಕ್ಷೆ ಮಾಡುತ್ತಾರೆ. ಸಂವಿಧಾನ ಏನು ನಿರೀಕ್ಷೆ ಮಾಡುತ್ತೆ ಇಷ್ಟಕ್ಕೆ ನಾನು ಸೀಮಿತವಾಗಿರುತ್ತೇನೆ. ಸದ್ಯಕ್ಕೆ ಯಾವ ಶಾಸಕರು ಸಮಯ ಕೇಳಿಲ್ಲ. ಜನರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದರು.
ಜನರಿಗೆ ವೋಟು ಹಾಕುವ ಹಕ್ಕು ಕೊಟ್ಟಿದ್ದೇವೆ. ಆದ್ದರಿಂದ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದರೆ ಸಾಕಪ್ಪ ನಿಮ್ಮ ಕೆಲಸ ಎಂದು ಹೇಳುತ್ತಾರೆ.ಶಾಸಕರ ರಾಜೀನಾಮೆಯಿಂದ ನನಗೆ ಬೇಸರವಾಗುವುದಿಲ್ಲ. ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.