ರಾಜೀನಾಮೆ ನೀಡಿ ಮುಂಬೈಲ್ಲಿ ತಂಗಿರುವ ಶಾಸಕರನ್ನು ಸಂಪರ್ಕಿಸಲು ದೋಸ್ತಿ ನಾಯಕರು ಪ್ರಯತ್ನ ಮುಂದುವರೆಸಿದ್ದಾರೆ.
ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸಿಎಂ ಸ್ಥಾನ ನೀಡಲಿದ್ದು, ಕಾಂಗ್ರೆಸ್ ನವರು ಸಿಎಂ ಆದರೆ, ಅತೃಪ್ತ ಶಾಸಕರು ಬರಲಿದ್ದಾರೆ. ಅವರನ್ನು ಕರೆತರಲು ಮನವೊಲಿಸಲಾಗುವುದು ಎನ್ನಲಾಗಿದೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಂಬೈನಲ್ಲಿರುವ ಶಾಸಕ ಎಂಟಿಬಿ ನಾಗರಾಜ್ ಮತ್ತು ಹೆಚ್. ವಿಶ್ವನಾಥ್ ಯಾರೇ ಮುಖ್ಯಮಂತ್ರಿಯಾದರೂ ನಾವು ವಾಪಸ್ ಬರಲ್ಲ. ಈಗಾಗಲೇ ಸ್ಪೀಕರ್ ಗೆ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ಯಾರೇ ಸಿಎಂ ಆದರೂ ನಾವು ಬರುವುದಿಲ್ಲ. ನಮ್ಮ ನಿರ್ಧಾರ ಬದಲಿಲ್ಲ. 13 ಶಾಸಕರು ಒಟ್ಟಾಗಿದ್ದೇವೆ.ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.