ಬೆಂಗಳೂರು: ನನ್ನ ಮುಂದೆ ಇರುವುದು ಕೋವಿಡ್ ನಿರ್ವಹಣೆ ಕೆಲಸ ಮಾತ್ರ. ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದ್ರು ಅಂದ್ರೆ, ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದದಲ್ಲಿ ನಾಯಕತ್ವ ಬದಲಾವಣೆ ಯತ್ನ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ನಿಯಂತ್ರಿಸುವುದು, ಜನ ಹಿತ ಕಾಪಾಡುವುದು ನನ್ನ ಆದ್ಯತೆ. ಕೋವಿಡ್ ಎದುರಿಸುವುದು ಮೊದಲ ಕೆಲಸ. ಬೇರೆ ಯಾವುದರ ಬಗ್ಗೆಯೂ ನನ್ನ ಗಮನ ಇಲ್ಲ ಎಂದು ತಿಳಿಸಿದರು.
ಒಟ್ಟಾಗಿ ಸಚಿವರು, ಶಾಸಕರು ಕೋವಿಡ್ ಸಮಸ್ಯೆಯನ್ನು ಎದುರಿಸಬೇಕು. ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದ್ರು ಅಂದ್ರೆ, ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ಲ ಎಂದು ನಾಯಕತ್ವ ಬದಲಾವಣೆ ಕಸರತ್ತಿಗಾಗಿ ದೆಹಲಿ ಹೋಗಿದ್ದವರಿಗೆ ಪರೋಕ್ಷವಾಗಿ ಸಿಎಂ ಟಾಂಗ್ ನೀಡಿದರು.
ಶಾಸಕಾಂಗ ಪಕ್ಷದ ಸಭೆ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಭೆ ಬಗ್ಗೆ ನಿಮ್ಮ ಜತೆ ಚರ್ಚಿಸುವ ಅಗತ್ಯ ಇಲ್ಲ ಎಂದು ತಿಳಿಸಿದರು.