ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!

0
826

ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!

ಅಲ್ಲಿ-ಇಲ್ಲಿ ಅಂತ ಸುತ್ತೋದು, ಫ್ರೆಂಡ್ಸ್ ಜೊತೆ ಜಾಲಿ ರೈಡ್ ಹೋಗೋದು ಒಂದೊಳ್ಳೆ ಅನುಭವವನ್ನು ಕೊಡುತ್ತೆ. ಆಗಾಗ ಬಿಡುವು ಮಾಡಿಕೊಂಡು ಪ್ರಯಾಣ ಮಾಡ್ತಾ ಇದ್ರೆ ಮನಸ್ಸಿಗೂ ನೆಮ್ಮದಿ ಸಿಗುತ್ತೆ..! ಬೇರೆ ದೇಶಕ್ಕೆ ಹೋದಾಗ ಅಲ್ಲಿ ಬೇರೆ ಬೇರೆ ಕಡೆ ಸುತ್ತೋದು ಕೂಡ ಸಖತ್ತಾಗಿರುತ್ತೆ..! ಅದು ಇನ್ನೊಂದು ರೀತಿ ಬೆಸ್ಟ್ ಎಕ್ಸ್ಪರಿಯನ್ಸ್..! ವಿದೇಶಕ್ಕೆ ಹೋದಾಗ ಅಲ್ಲಿ ತಿರುಗಾಡ ಬೇಕು ಅಂದ್ರೆ ಬಾಡಿಗೆ ಕಾರೇ ಗತಿ..! ನಾವೇ ನಮ್ಮ ಗಾಡಿಲಿ ಹೋಗೋಕೆ ನಮ್ ಬಳಿ ಅಲ್ಲಿನ ಲೈಸೆನ್ಸ್ ಇರಲ್ವಲ್ಲಾ..?! ಬಾಡಿಗೆ ಕಾರಲ್ಲಿ ಎಷ್ಟು ಅಂತ, ಎಲ್ಲಿ ಅಂತ ಸುತ್ತೋಕಾಗುತ್ತೆ..! ಆದರೆ, ನಿಮಗಿದು ಗೊತ್ತಿರಲಿ, “ನಮ್ಮ ಭಾರತೀಯ ಪರವಾನಗಿ ಅಥವಾ ಇಂಡಿಯನ್ ಲೈಸೆನ್ಸ್ ಇದ್ರೆನೇ ಸಾಕಾಗುತ್ತೆ. ಕೆಲವೊಂದು ದೇಶಗಳಲ್ಲಿ ಆರಾಮಾಗಿ ಡ್ರೈವಿಂಗ್ ಮಾಡಬಹುದು..!
ಯಾವ್ ಯಾವ್ ದೇಶದಲ್ಲಿ ಭಾರತದ ಲೈಸೆನ್ಸ್ ಇದ್ರೆ ಸಾಕಾಗುತ್ತೆ ಅನ್ನೋದು ಇಲ್ಲಿದೆ..! ಎಲ್ಲರೂ ತಿಳಿಯ ಬೇಕಾದ ಮಾಹಿತಿ ಇದಾಗಿದ್ದು, ನೀವೂ ಎಲ್ಲರಿಗೂ ತಿಳಿಸೋ ಪ್ರಯತ್ನ ಮಾಡಿ.

1. ನಿಮ್ಮ ಬಳಿ ಭಾರತೀಯ ಲೈಸೆನ್ಸ್ (ಪರವಾನಗಿ) (ವ್ಯಾಲಿಡ್ ಇಂಡಿಯನ್ ಲೈಸೆನ್ಸ್) ಇದ್ದರೆ ಬ್ರಿಟನ್ನಲ್ಲಿ ಎಲ್ಲಿ ಬೇಕಾದ್ರೂ ಡ್ರೈವಿಂಗ್ ಮಾಡಿಕೊಂಡು ಹೋಗ್ಬಹುದು, ಆರಾಮಾಗಿ ಸುತ್ತಬಹುದು..! ಆದರೆ, ಈ ಅವಕಾಶ ಒಂದು ವರ್ಷದ ಮಟ್ಟಿಗೆ ಮಾತ್ರ..!

347-600x400

2. ಭಾರತೀಯ ಪರವಾನಗಿ(ಲೈಸೆನ್ಸ್) ಇದ್ರೆ ನೀವು ಆಸ್ಟ್ರೇಲಿಯಾದಲ್ಲಿ ಎಷ್ಟು ಸಮಯ ಉಳ್ಕೊಂಡಿರ್ತೀರೋ ಅಷ್ಟೂ ಕಾಲವೂ ಯಾವುದೇ ಟೆಂಕ್ಷನ್ ಇಲ್ದೆ ನೀವೇ ಡ್ರೈವಿಂಗ್ ಮಾಡಿಕೊಂಡು ಎಲ್ಲಿಗೆ ಬೇಕಾದರೂ ಹೋಗಬಹುದು..! ಆದರೆ, ನಿಮ್ಮ ಲೈಸೆನ್ಸ್ ಇಂಗ್ಲೀಷ್ ನಲ್ಲಿಯೇ ಇರ್ಬೇಕು ಮತ್ತುನೀವು ಐಡಿಪಿಯನ್ನೂ ಇಟ್ಟುಕೊಂಡು ಹೋಗಬೇಕಷ್ಟೇ..!

2221-600x414

3. ಭಾರತೀಯ ಪರವಾನಿಗೆ ಇಂಗ್ಲೀಷ್ನಲ್ಲಿದ್ದರೆ ಒಂದುವರ್ಷದ ಮಟ್ಟಿಗೆ ಅಮೇರಿಕಾದಲ್ಲಿ ಡ್ರೈವಿಂಗ್ ಮಾಡಬಹುದು..! ನೀವು ಯಾವುದೇ ಪ್ರದೇಶಿಕ ಭಾಷೆಯ ಲೈಸೆನ್ಸ್ ಹೊಂದಿದ್ದರೆ ನಿಮ್ಮ ಬಳಿ ಐಡಿಪಿ ಇರುವುದು ಅತ್ಯಗತ್ಯ..!

347-600x400

4. ಭಾರತೀಯ ಪರವಾನಿಗೆ ಇದ್ರೆ ಜರ್ಮನಿಯಲ್ಲೂ ಡ್ರೈವಿಂಗ್ ಮಾಡ್ಬಹುದು..! ಈ ಅವಕಾಶ ಆರು ತಿಂಗಳಿಗೆ ಮಾತ್ರ..! ಆದರೂ.., ದೇಶದ ಸುರಕ್ಷತೆ ದೃಷ್ಟಿಯಲ್ಲಿ ನೀವು ರಾಯಭಾರಿಯಿಂದ ಪರವಾನಗಿಯನ್ನು ಅನುವಾದ ಮಾಡಿಸಿಕೊಂಡಿರಲೇ ಬೇಕಾಗುತ್ತೆ..!

447-600x375

5. ಭಾರತೀಯ ಪರವಾನಿಗೆಯೊಂದಿಗೆ ಸುಂದರವಾದ ಸ್ವಿಟ್ಜರ್ ರ್ಲ್ಯಾಂಡಿನಲ್ಲಿ ಒಂದು ವರ್ಷ ಬಿಂದಾಸಾಗಿ ಡ್ರೈವಿಂಗ್ ಮಾಡಬಹುದು..!

545-600x338

6. ಭಾರತೀಯ ಪರವಾನಿಗೆಯಿದ್ದರೆ ಮಾರಿಷ್ನಲ್ಲೂ ಒಂದು ವರ್ಷ ನೀವೇ ಡ್ರೈವಿಂಗ್ ಮಾಡಬಹುದು..!

640-600x340

7. ಭಾರತೀಯ ಪರವಾನಿಗೆಯಿದ್ದರೆ ನ್ಯೂಜಿಲ್ಯಾಂಡಿನಲ್ಲೂ ನಿಮಗೆ ಡ್ರೈವಿಂಗ್ ಮಾಡೋ ಅವಕಾಶವಿದೆ..!

736-600x400

8. ಭಾರತೀಯ ಪರವಾನಿಗೆಯನ್ನಿಟ್ಟುಕೊಂಡೇ ನೀವು ಫ್ರಾನ್ಸ್ನಲ್ಲೂ ಡ್ರೈವಿಂಗ್ ಮಾಡ್ಬಹುದು..! ಆದರೆ ನಿಮ್ಮ ಪಾಸ್ಪೋಟರ್್ನಲ್ಲಿನ ಭಾಷೆಯನ್ನು ಫ್ರೆಂಚ್ಭಾಷೆಗೆ ಬದಲಾಯಿಸ ಬೇಕಾಗುತ್ತೆ..!

837-600x401
9. ಭಾರತೀಯ ಪರವಾನಿಗೆಯಿದ್ದರೆ ಮೂರು ತಿಂಗಳುಗಳಕಾಲ ನಾರ್ವೆಯಲ್ಲೂ ವಾಹನ ಓಡಿಸಬಹುದು..!

930-600x293
10. ಭಾರತೀಯ ಪರವಾನಿಗೆ ಇಂಗ್ಲೀಷ್ನಲ್ಲಿದ್ದರೆ ಸಾಕು ದಕ್ಷಿಣ ಆಫ್ರಿಕಾದಲ್ಲೂ ನೀವು ಡ್ರೈವಿಂಗ್ ಮಾಡ್ಬಹುದು..!

1027-600x398
ಭಾರತೀಯ ಲೈಸೆನ್ಸ್ ಇಟ್ಕೊಂಡು ನಾವು ಡ್ರೈವಿಂಗ್ ಮಾಡಲು ಅವಕಾಶ ಇರೋ ಬೇರೆ ದೇಶಗಳು ನಿಮಗೆ ಗೊತ್ತೇ..?! ಗೊತ್ತಿದ್ದರೆ ಆ ದೇಶಗಳನ್ನು ಈ ಕೆಳಗಿರೋ ಕಾಮೆಂಟ್ ಸೆಕ್ಷನ್ನಲ್ಲಿ ತಿಳಿಸಿ.

 

LEAVE A REPLY

Please enter your comment!
Please enter your name here