ಬಹುನಿರೀಕ್ಷೆಯ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಕಾಂಬಿನೇಷನ್ ನ ಯುವರತ್ನ ಚಿತ್ರ ಏಪ್ರಿಲ್ ಒಂದನೇ ತಾರೀಕು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ರಾಜಕುಮಾರ ದಂತಹ ದೊಡ್ಡ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ ಈ ಜೋಡಿ ಇದೀಗ ಮತ್ತೊಮ್ಮೆ ಬರುತ್ತಿದ್ದು ಎಲ್ಲರಲ್ಲಿಯೂ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇನ್ನು ದುನಿಯಾ ವಿಜಯ್ ಅವರು ಯುವರತ್ನ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಶುಭಾಶಯವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಹೌದು ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿರುವ ದುನಿಯಾ ವಿಜಯ್ ಅವರು ಯುವರತ್ನ ಚಿತ್ರ ರಾಜಕುಮಾರ ದಂತೆ ದೊಡ್ಡ ಯಶಸ್ಸು ಕಾಣಲಿ ಎಂದು ಆಶಿಸಿದ್ದಾರೆ. ದುನಿಯಾ ವಿಜಯ್ ಅವರ ಈ ಪೋಸ್ಟ್ ಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದು ದುನಿಯಾ ವಿಜಯ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.