ಸಿನಿಮಾ.. ಬರೀ ಮನರಂಜನೆಯ ವಸ್ತುವಲ್ಲ.. ಅದೊಂದು ಶಕ್ತಿ.. ಕೇವಲ ಸಿನಿಮಾವಾಗಿರೋ ಕಥೆ ಶಕ್ತಿಯಾಗಿ ಪರಿಣಮಿಸೋದು ಅದು ಕೊಡೋ ಸಂದೇಶ & ಅದರ ನೀತಿಯಿಂದ ಮಾತ್ರ ಸಾಧ್ಯ.. ಈ ತರಹದ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಕೊಡುವುದು ಪುನೀತ್ ರಾಜ್ ಕುಮಾರ್ ಮಾತ್ರ. ಇದು ಎಲ್ಲರಿಗೂ ತಿಳಿದಿರುವ ವಿಷಯವೇ ಪುನೀತ್ ಚಿತ್ರವೆಂದರೆ ಅಲ್ಲಿ ಒಳ್ಳೆಯ ಸಂದೇಶ ಇರುವುದು ಕಟ್ಟಿಟ್ಟ ಬುತ್ತಿ.
ಹೀಗಾಗಿ ಪುನೀತ್ ಸಿನಿಮಾ ಎಂದರೆ ಬೆಳ್ಳಂಬೆಳಿಗ್ಗೆ ಫ್ಯಾಮಿಲಿ ಸಮೇತ ಮೊದಲ ದಿನವೇ ಚಿತ್ರಮಂದಿರದತ್ತ ಜನರು ಬರುತ್ತಾರೆ. ಈ ಹಿಂದಿನ ಸಿನಿಮಾಗಳಂತೆ ಯುವರತ್ನ ಚಿತ್ರ ವೀಕ್ಷಿಸಲು ಫ್ಯಾಮಿಲಿ ಪ್ರೇಕ್ಷಕರು ಬೆಳ್ಳಂಬೆಳಿಗ್ಗೆ ಚಿತ್ರಮಂದಿರದತ್ತ ಬಂದಿದ್ದರು. ಕೇವಲ ಮಹಿಳಾ ಪ್ರೇಕ್ಷಕರು ಮಾತ್ರವಲ್ಲ ಯುವರತ್ನ ಚಿತ್ರ ವೀಕ್ಷಿಸಲು ಹಿರಿಜೀವವೊಂದು ಚಿತ್ರಮಂದಿರಕ್ಕೆ ನೂಕುನುಗ್ಗಲಿನಲ್ಲಿಯೇ ಬಂದಿತ್ತು.

ಹೌದು ವಯಸ್ಸಾದ ಅಜ್ಜಿಯೊಬ್ಬರು ಯುವರತ್ನ ಚಿತ್ರ ವೀಕ್ಷಿಸಲು ಬೆಳ್ಳಂಬೆಳಿಗ್ಗೆಯೇ ಚಿತ್ರಮಂದಿರಕ್ಕೆ ಬಂದಿದ್ದು ವಿಶೇಷ. ಮಂಡಿ ಹಿಡಿದು ಮೆಟ್ಟಿಲುಗಳನ್ನು ಹತ್ತುತ್ತಾ ಯುವರತ್ನ ಚಿತ್ರ ವೀಕ್ಷಿಸಲು ಬಂದಿದ್ದ ಅಜ್ಜಿಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ಅವರ ಸಿನಿಮಾ ಎಂದರೆ ಹೀಗೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕಾಮೆಂಟ್ ಹಾಕುತ್ತಿದ್ದಾರೆ. ಜೀವ ಹೋಗುವ ಸಮಯ ಹತ್ತಿರವಿದ್ದರೂ ಸಿನಿಮಾ ವೀಕ್ಷಿಸುವ ಹಂಬಲವನ್ನು ಆ ಹಿರಿ ಕೇರಳದಲ್ಲಿ ಹುಟ್ಟುಹಾಕಿರುವ ಪುನೀತ್ ರಾಜ್ ಕುಮಾರ್ ಅವರು ಇಲ್ಲಿ ನಿಜಕ್ಕೂ ಶ್ರೇಷ್ಠ ನಟನಾಗಿ ನಿಲ್ಲುತ್ತಾರೆ..






