ಯೂಟ್ಯೂಬ್.. ಟಾಪ್ 1 ಸೋಶಿಯಲ್ ಮೀಡಿಯಾ..! ಗಾಸಿಪ್ಗಳನ್ನು ಹಬ್ಬಿಸೋರಿಗಂತೂ ಬಹುದೊಡ್ಡ ವೇದಿಕೆಯಾಗಿದೆ. ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗೋಕೆ ಶುರುವಾದ್ಮೇಲೆ, Suscribers ಹೆಚ್ಚಾದಂತೆ ವೋನ್ ಕಂಟೆಂಟ್ ವಿಡಿಯೋಗಳಿಗೆ ದುಡ್ಡು ಕೂಡ ಬರೋದ್ರಿಂದ ಯೂಟ್ಯೂಬ್ನಲ್ಲಿ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಹೆಚ್ಚು ಹೆಚ್ಚು ಚಾನಲ್ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅಂತೆ ಕಂತೆ ಪುರಾಣ ಹೇಳ್ಕೊಂಡು ದುಡ್ಡಿಗಾಗಿಯೇ ಚಾನಲ್ ಮಾಡಿಕೊಳ್ಳುವುದಲ್ಲ.. ಬದಲಾಗಿ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಗುರುತಿಸಿಕೊಳ್ಳಬೇಕು.
ಅಗತ್ಯ ಮಾಹಿತಿಗಳನ್ನು ನೀಡುವ ಇನ್ಫಾರ್ಮೇಟಿವ್ ಚಾನಲ್ಗಳು ಬೇಗನೇ ಟಾಪ್ ಲೀಸ್ಟ್ ನಲ್ಲಿ ಬರಲ್ಲ. ಆದರೆ, ನಿಧಾನಕ್ಕಾದರೂ ಗೆದ್ದೇ ಗೆಲ್ಲುತ್ತವೆ.. ಯಾಕಂದ್ರೆ ಮಾಹಿತಿಗಾಗಿ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುವ ಜಾಗೃತರು ನಮ್ಮಲ್ಲಿದ್ದಾರೆ.
ಈಗ ವಿಜ್ಞಾನದ ಟೀಚರ್ ಒಬ್ರು ಯೂಟ್ಯೂಬ್ ಚಾನಲ್ ಶುರುಮಾಡಿದ್ದಾರೆ. ಅವರ ಹೆಸರು ರಾಮಚಂದ್ರ ಅಂತ. ಅವರು ತಮ್ಮ ಜ್ಞಾನವನ್ನು ಯೂಟ್ಯೂಬ್ ಮೂಲಕ ಇನ್ನೊಬ್ಬರಿಗೆ ಹಂಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿದಂತೆ ಯೂಟ್ಯೂಬ್ ಮೂಲಕವೂ ಒಂದಿಷ್ಟು ಮಂದಿಯನ್ನು ಎಜುಕೇಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. Neural Pruning ಎನ್ನುವ ಚಾನಲ್ ಅನ್ನು ರಾಮಚಂದ್ರ ಅವರು ತೆರೆದಿದ್ದಾರೆ. ಈಗಾಗಲೇ ಐದಾರು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ರಾಮಚಂದ್ರರವರು ಯೂಟ್ಯೂಬ್ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ರಾಮಚಂದ್ರರವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ..ರಾಮಚಂದ್ರ ಮೇಷ್ಟ್ರು ಯೂಟ್ಯೂಬ್ ಮೇಷ್ಟ್ರು ಆಗಲಿ ಅಂತ ಹಾರೈಸೋಣ.
ಯೂಟ್ಯೂಬ್ನಲ್ಲಿ ಸೈನ್ಸ್ ಟ್ರೆಂಡ್ ಸೆಟ್ ಮಾಡೋಕೆ ರೆಡಿಯಾದ್ರು ರಾಮಚಂದ್ರ ಮೇಷ್ಟ್ರು..!
Date: