No menu items!
12.1 C
Munich
Wednesday, May 20, 2026

ಇಬ್ಬರ ಜಗಳಕ್ಕೆ ಫುಲ್ ಸ್ಟಾಪ್ ಇಟ್ಟ ವಿರಾಟ್ ಕೊಹ್ಲಿ.

Must read

2019ರ ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಜಗಜಾಹೀರ್ ಆಗಿತ್ತು.


ಆದರೆ ಇದಕ್ಕೆ ಕಾರಣ ಏನೆಂಬುದು ಯಾರಿಗೂ ಗೊತ್ತಿರಲಿಲ್ಲ ಇದೀಗ ವಿರಾಟ್ ಮತ್ತು ರೋಹಿತ್ ನಡುವಿನ ಜಗಳಕ್ಕೆ ರೋಹಿತ್ ಪತ್ನಿ ರಿತಿಕಾ ಕಾರಣ ಎಂಬ ವದಂತಿಗಳು ಹರಿದಾಡಿದ್ದು ಆಯ್ತು ಆದರೆ ಇದೀಗ ಇದಕ್ಕೆ ಸಂಬಂಧಪಟ್ಟಂತೆ ಸ್ವತಃ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ನಡುವೆ ಎದ್ದಿರುವ ಅಸಮಾಧಾನದ ಗಾಳಿಸುದ್ದಿಗೆ ರೋಹಿತ್ ಶರ್ಮಾ ಮಾಡಿದ ಒಂದು ಟ್ವೀಟ್ ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಅಷ್ಟಕ್ಕೂ ರೋಹಿತ್ ಮಾಡಿರುವ ಟ್ವೀಟ್ ಇಂತಿದೆ ‘ನಾನು ದೇಶಕ್ಕಾಗಿ ಕಣಕ್ಕಿಳಿಯುತ್ತೇನೆಯೇ ಹೊರತು, ಕೇವಲ ತಂಡಕ್ಕಾಗಿ ಆಡುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.


ಆದರೆ ರೋಹಿತ್ ಮಾಡಿದ ಈ ಟ್ವೀಟ್ ಬೆನ್ನಲ್ಲೇ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ ಈ ರೀತಿಯ ಗಾಳಿ ಸುದ್ದಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರು. ನನ್ನ ಹಾಗೂ ರೋಹಿತ್ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವುದು ಹಾಸ್ಯಾಸ್ಪದವಾದದ್ದು ಹಾಗೆಯೇ ಆದಾರರಹಿತವಾದದ್ದು ಎಂದು ಸ್ಪಷ್ಟನೆ ನೀಡಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article