ಯೂಸುಫ್ ಪಠಾಣ್ ಗೆ ಕೊರೊನಾ ಸೊಂಕು

admin
1 Min Read

ಇಂದು ಬೆಳಿಗ್ಗೆಯಷ್ಟೇ ಕ್ರಿಕೆಟ್ ದೇವರು ಎಂದೇ ಹೆಸರು ಮಾಡಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿರುವುದು ಸುದ್ದಿಯಾಗಿತ್ತು. ಇದೀಗ ಭಾರತದ ಮಾಜಿ ಆಟಗಾರ ಯೂಸುಫ್ ಪಠಾಣ್ ಅವರಿಗೂ ಸಹ ಕೊರೋನಾವೈರಸ್ ದೃಢಪಟ್ಟಿದೆ.

 

 

ಇತ್ತೀಚಿಗಷ್ಟೆ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಆಡಿದ್ದ ಇಬ್ಬರು ಆಟಗಾರರಿಗೆ ಒಂದೇ ದಿನ ಕೊರೊನಾ ಸೊಂಕು ಬಂದಿರುವುದು ಎಲ್ಲರಲ್ಲಿಯೂ ಭಯ ಮೂಡಿಸಿದೆ. ಹೌದು ಸಚಿನ್ ತೆಂಡೂಲ್ಕರ್ ಮತ್ತು ಯೂಸುಫ್ ಪಠಾಣ್ ಇಬ್ಬರೂ ಸಹ ಇತ್ತೀಚೆಗಷ್ಟೇ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಕ್ರಿಕೆಟ್ ಆಡಿದ್ದರು. ಇದೀಗ ಇಬ್ಬರಿಗೂ ಒಂದೇ ದಿನ ಕೊರೊನಾ ಸೋಂಕು ದೃಢಪಟ್ಟಿರುವುದು ಇತರ ಆಟಗಾರರಲ್ಲಿ ಮತ್ತು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದೆ.

Share This Article
Leave a Comment