ನಿರ್ದೇಶಕ ಮುರುಗದಾಸ್ ಮತ್ತು ‘ಸೂಪರ್‌ಸ್ಟಾರ್’ ರಜನಿಕಾಂತ್ ಮೊದಲ ಬಾರಿಗೆ ಜೊತೆಗೂಡಿ ತೆರೆಗೆ ತಂದಿರುವ ‘ದರ್ಬಾರ್’ ಸಿನಿಮಾ ತೆರೆಗೆ ಬಂದಿದ್ದು ವಿಶ್ವದಾದ್ಯಂತ ತೆರೆಕಂಡ ರಜನಿ ಸಿನಿಮಾ ನೋಡಿ ಪ್ರೇಕ್ಷಕ ಕುಶಿಯಾಗಿದ್ದಾನೆ ರಜನಿಕಾಂತ್ ಅಂದ್ರೆ ಅಭಿಮಾನಿಗಳಿಗೆ ಅದೊಂತರಾ ಕ್ರೇಜ್ ಅವರು ಮಾತಿಗೆ ಅವರ ಸ್ಟೈಲ್ ಗೆ ಅಭಿಮಾನಿಗಳು ಫಿಧಾ ಅಗಿದ್ದಾರೆ ದರ್ಬಾರ್ ಸದ್ದು ಎಲ್ಲೆಡೆ ಜೋರಾಗೆ ಕೇಳಿಬರುತ್ತಿದೆ ಎನ್ನಬಹುದು.
ತೆರೆಯ ಮೇಲೆ ‘ಯಂಗ್ ಆಯಂಡ್ ಎನರ್ಜೆಟಿಕ್’ ರಜನಿಯ ಸ್ಟೈಲ್‌ಗಳು ಮಾತ್ರ ಎಂದಿನಂತೆ ವಿಜೃಂಭಿಸಿವೆ. ಮ್ಯಾಗ್ಡಲಿನಾ ವಿಸಿಸ್ಲಿಕ್ ಅವರ ಮೇಕಪ್ ಮತ್ತು ನಿಹಾರಿಕಾ ಖಾನ್ ವಸ್ತ್ರವಿನ್ಯಾಸ ಇದಕ್ಕೆ ಕಾರಣ. ಈ ವಯಸ್ಸಲ್ಲೂ ಬನಿಯನ್ ಕಳಚಿ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾ ಮೈಕಟ್ಟು ಪ್ರದರ್ಶಿಸಿದ ‘ತಲೈವರ್’ ನೋಡಿ ಪ್ರೇಕ್ಷಕ ಫಿಧಾ ಅಗಿದ್ದಾನೆ .