ರಟ್ಟಾಯ್ತು ಮಲೈಕಾಳ ಗುಟ್ಟು..!

Date:

‘ಮುನ್ನಿ ಬದ್ನಾಮ್ ಹುಯೀ’ ಅಂತಾ ಹರೆಯದ ಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಮಲೈಕಾ ಅರೋರಾ. ಇಂದಿಗೂಹರೆಯದ ಹುಡುಗಿಯಾಗಿ ಕಾಣಿಸಿಕೊಳ್ಳುವ ಮಲೈಕಾ ತನ್ನ ಬ್ಯೂಟಿ ಸೀಕ್ರೆಟ್ಸ್ ಬಿಟ್ಟು ಕೊಟ್ಟಿದ್ದಾಳೆ. ಬಿಟೌನ್ ನ ಹಾಟ್ ಸ್ವೀಟ್ ಹಾರ್ಟ್ ಮಲೈಕಾ ಅರೋರಾ. ವಯಸ್ಸು 45 ದಾಟಿದ್ರೂ, ಲುಕ್ಸ್ ಇನ್ನೂ ಸ್ವೀಟ್ 16ನಲ್ಲೇ ನಿಂತಿವೆ. ಆಕೆಯ ಹೊಳೆಯವ ಮೈಕಾಂತಿ, ಫಿಟ್ ಆದ ದೇಹ, ದಟ್ಟವಾದ ಸುಂದರ ಕೂದಲು… ಅಬ್ಬಬ್ಬಾ! ಅರ್ಜುನ್ ಕಪೂರ್ ನಂಥ ಯಂಗ್ ಸ್ಟಾರ್ ಮಲೈಕಾ ಹಿಂದೆ ಅಲೆಯುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ. ಹಾಗಿದ್ದರೆ, ಸಲೀಸಾಗಿ ಹರೆಯದ ಹುಡುಗರ ಹಾರ್ಟ್ ಲೂಟಿ ಮಾಡುವ ಬಾಲಿವುಡ್ನ ಹಾಟಿ ಈ ಪಾಟಿ ಬ್ಯೂಟಿ ಕಾಣೋದು ಹೇಗೆ ಗೊತ್ತಾ


ಬೆಳಗ್ಗೆ ಎದ್ದೊಡನೆ ಬಿಸಿ ನೀರಿಗೆ ನಿಂಬೆರಸ ಸೇರಿಸಿ ಸೇವಿಸುವುದನ್ನು ಮಲೈಕಾ ಎಂದಿಗೂ ತಪ್ಪಿಸುವುದಿಲ್ಲವಂತೆ. ಇದು ತ್ವಚೆಯ ಕಾಂತಿ ಹೆಚ್ಚಿಸಿ, ವಯಸ್ಸನ್ನು ಹಿಡಿದು ನಿಲ್ಲಿಸುತ್ತದೆ. ಜೊತೆಗೆ, ಜೀರ್ಣಕ್ರಿಯೆಗೂ ಸಹಕಾರಿ. ಮೇಕಪ್ ವಿಷಯಕ್ಕೆ ಬಂದರೆ ಆಕೆ ಕೆಮಿಕಲ್ಸ್ ರಹಿತವಾದ ಆರ್ಗ್ಯಾನಿಕ್ ಉತ್ಪನ್ನಗಳನ್ನೇ ಬಳಸುತ್ತಾಳಂತೆ. ಸೂಕ್ಷ್ಮ ಹಾಗೂ ಪ್ರಬುದ್ಧ ಚರ್ಮಕ್ಕೆ ಈ ಉತ್ಪನ್ನಗಳೇ ಬೆಸ್ಟ್ ಅಂತಾಳೆ ಅರೋರಾ. ಪ್ರತಿ ರಾತ್ರಿ ಮೇಕಪ್ ತೆಗೆಯದೇ ಮಲಗೋದಿಲ್ಲ ಎನ್ನುವ ಮಲೈಕಾ, ಬಳಿಕ ಎರಡೆರಡು ಬಾರಿ ಮುಖ ತೊಳೆಯುತ್ತಾಳಂತೆ.

ಕಾಲ ಯಾವುದೇ ಇರಲಿ, ಚರ್ಮಕ್ಕೆ ಬಹಳಷ್ಟು ನೀರನ್ನು ಒದಗಿಸುವುದು ಎಲ್ಲಕ್ಕಿಂತ ಮುಖ್ಯ. ಇದೇ ಅತ್ಯುತ್ತಮ ಸ್ಕಿನ್ ಕೇರ್ ಮಂತ್ರ. ಜೊತೆಗೆ ಸನ್ ಸ್ಕ್ರೀನ್ ಬಳಸುವುದನ್ನು ಮರೆಯಲೇಬೇಡಿ ಎನ್ನುತ್ತಾಳೆ. ಇನ್ನು ಕೂದಲಿನ ವಿಷಯಕ್ಕೆ ಬಂದರೆ ವಾರಕ್ಕೊಮ್ಮೆ ಕೂದಲಿಗೆ ಎಣ್ಣೆ ಮಸಾಜ್ ತಪ್ಪಿಸುವುದಿಲ್ಲವಂತೆ. ಇವೆಲ್ಲಾವನ್ನು ಅಚ್ಚುಕಟ್ಟಾಗಿ ಶಿಸ್ತಿನಿಂದ ಮಾಡುತ್ತಾ ಬಂದಿರುವುದರಿಂದ ಮಲೈಕಾ ಅರೋರಾ ಇಂದಿಗೂ ಬಾಲಿವುಡ್ನ ಹಾಟ್ ಬ್ಯೂಟಿ ಆಗಿದ್ದಾಳೆ.

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...