ಅಂತಿಮ ದರ್ಶನ ಪಡೆದ ಪರಮೇಶ್ವರ್ ಅವರು, ರಮೇಶ್ ಅವರ ಕುಟುಂಬದವರು ಮಕ್ಕಳನ್ನು ಕಂಡು ಸಾಂತ್ವನ ಹೇಳಿದ್ದಾರೆ. ರಮೇಶ್ ಪುತ್ರನನ್ನು ತಬ್ಬಿಕೊಂಡು ಸಂತೈಸಿ, ಕುಟುಂಬದವರ ಕಣ್ಣೀರು ಕಂಡು ಭಾವುಕರಾಗಿದ್ದಾರೆ. ರಮೇಶ್ ಪತ್ನಿಗೆ ಸಾಂತ್ವನ ಹೇಳುವ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದಾರೆ.
ರಾಮನಗರ ಜಿಲ್ಲೆಯ ಮೇಳೆಹಳ್ಳಿಯಲ್ಲಿ ರಮೇಶ್ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ರಮೇಶ್ ಅವರ ಸಾವಿನ ಕುರಿತಾಗಿ ಜ್ಞಾನ ಭಾರತಿ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಆತ್ಮಹತ್ಯೆಗೂ ಮೊದಲು ರಮೇಶ್ ಕರೆ ಮಾಡಿದ್ದರೆನ್ನಲಾದ ಸ್ನೇಹಿತರ ಮಾಹಿತಿ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.