ಭಾರಿ ಮಳೆ ಮತ್ತು ನೆರೆ ಹಾನಿಯಿಂದ ಜನ ಸಂಕಷ್ಟದಲ್ಲಿದ್ದಾಗ ಈ ಪುಣ್ಯಾತ್ಮ ಬಾಂಬೆಯಲ್ಲಿ ಇದ್ದರು. ಸಂತ್ರಸ್ತರ ಬದುಕು ಏನಾಗಿದೆ ಎಂದು ಅವರಿಗೆ ಗೊತ್ತಿಲ್ಲ. ಉಪಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಕುಮಾರಸ್ವಾಮಿ.
ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ರೈತರ ಸಾಲ ಮನ್ನಾ ಆಗಿದೆ. ಗೋಕಾಕ್ ಕ್ಷೇತ್ರದಲ್ಲಿ 40 ಸಾವಿರ ರೈತರ ಸಾಲ ಮನ್ನಾ ಆಗಿದ್ದು, ಈ ಮನೆಗಳಲ್ಲಿ ಕನಿಷ್ಠ ಮೂರು ಮತ ಬಿದ್ದರೂ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಹಾಗು ರಮೇಶ್ ಜಾರಕಿಹೊಳಿ ಅವರ ಪಾಪದ ಕೊಡ ತುಂಬಿದೆ. ಗೋಕಾಕ್ ಕ್ಷೇತ್ರದಲ್ಲಿ ಮತದಾರರು ಹೊಸ ರಾಜಕೀಯ ಇತಿಹಾಸ ಬರೆಯಲಿದ್ದಾರೆ ಹಾಗಾಗಿ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ .