ರವಿ ಬೆಳಗೆರೆಯವರು ಒಂದು ಯೂಟ್ಯೂಬ್ ಚಾನೆಲ್ನ್ನು ಮಾಡಿಕೊಂಡು ಅದರಲ್ಲಿ ಬೆಳ್ ಬೆಳಿಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮವನ್ನು ಮಾಡಿಕೊಂಡು ಹೋಗ್ತಿದ್ರು . ಇದರಲ್ಲಿ ಒಂದೊಂದು ದಿನ ಒಂದೊಂದು ವಿಷಯವನ್ನು ತೆಗೆದುಕೊಂಡು ಅವರಿಗೆ ಇಚ್ಛೆ ಬಂದಂತೆ ಮಾತನಾಡುವುದು ಅವರ ಸ್ಟೈಲ್ ಆಗಿದೆ . ಹಾಗೆ ಮೊನ್ನೆ ದರ್ಶನ್ ಅವರು ಹೆಂಡತಿಗೆ ಹೊಡೆದಿದ್ದಾರೆ ಎಂಬ ವಿಷಯವನ್ನು ತೆಗೆದುಕೊಂಡು ಯೂಟ್ಯೂಬ್ ಶೋನಲ್ಲಿ ಮಾತನಾಡಿದ್ದಾರೆ .
ರವಿ ಬೆಳೆಗೆರೆ ಮಾತಿಗೆ ದರ್ಶನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ ರವಿ ಬೆಳಗೆರೆಯವರು ಬಾಯಿಗೆ ಬಂದಂತೆ ದರ್ಶನ್ ಹಾಗೂ ದುನಿಯಾ ವಿಜಿ ಅವರ ಬಗ್ಗೆ ಆ ಶೋನಲ್ಲಿ ಹೇಳಿದ್ದಾರೆ . ಇದಕ್ಕೆ ಇನ್ನೂ ದರ್ಶನ್ ಪ್ರತಿಕ್ರಿಯೆ ನೀಡಿಲ್ಲ ಆದರೆ ದುನಿಯಾ ವಿಜಯ್ ಅವರು ಧನಂಜಯ ಅವರ ಹೊಸ ಚಿತ್ರದ ಮುಹೂರ್ತಕ್ಕೆ ಬಂದಿದ್ದಾಗ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ . ‘ ರವಿ ಬೆಳಗೆರೆ ಬದುಕಿದ್ದರೆ ಅವನು ಇಪ್ಪತ್ತು ದಿವಸ ಮಾನಸ ಹಾಸ್ಪಿಟಲ್ನಲ್ಲಿ ಕುಡಿದು ಮಲಗಿರುತ್ತಾನೆ ನಂತರ ಬಂದು ಬಾಯಿಗೆ ಬಂದಂತೆ ದರ್ಶನ್ ಸಂಸಾರದ ಬಗ್ಗೆ ಹಾಗೂ ನನ್ನ ಸಂಸಾರದ ಬಗ್ಗೆ ಮಾತನಾಡಿ ಮಾತನಾಡುತ್ತಾನೆ ಮೊದಲು ಅವನು ಸರಿಯಿದ್ದು ನಂತರ ಬೇರೆಯವರಿಗೆ ಬುದ್ಧಿ ಹೇಳಬೇಕು ಅವನಿಗೆ ಎರಡು ಮದುವೆಯಾಗಿದೆ ನಾಲ್ಕು ಮಕ್ಕಳಿದ್ದಾರೆ ‘ ಇದು ಅವನಿಗೆ ವಾರ್ನಿಂಗ್ ಎಂದು ಕೂಡ ದುನಿಯಾ ವಿಜಿ ಅವರು ಸುದ್ದಿಗಾರರಿಗೆ ಹೇಳಿದ್ದಾರೆ .