ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಸಹ ಪೊಗರು ಚಿತ್ರದಲ್ಲಿ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ದೊಡ್ಡ ದೊಡ್ಡ ಚಿತ್ರಗಳ ಆಫರ್ ಬಂದ ನಂತರ ಕನ್ನಡದಿಂದ ಕೊಂಚ ದೂರ ಉಳಿದಂತೆ ರಶ್ಮಿಕಾ ಅವರು ಕಾಣಿಸುತ್ತಿದ್ದಾರೆ. ಇನ್ನು ರಶ್ಮಿಕಾ ಅವರ ನಡವಳಿಕೆಯೂ ಸಹ ಅದೇ ರೀತಿ ಇದ್ದು ಕೆಲವೊಂದಷ್ಟು ಕನ್ನಡ ಚಿತ್ರಗಳಿಂದ ಹೊರ ನಡೆದದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ರಶ್ಮಿಕಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು ಇಂದು ಆ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ.
ಇನ್ನು ಇಂದು ಬಿಡುಗಡೆಯಾಗಿರುವ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದು , ಧ್ರುವ ಸರ್ಜಾ ಅವರ ಡೈಲಾಗ್ ಡೆಲಿವರಿಯನ್ನು ತುಂಬಾ ದಿನಗಳ ನಂತರ ಪ್ರೇಕ್ಷಕರು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನು ಈ ಟ್ರೈಲರ್ ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್ನಲ್ಲಿ ಧ್ರುವಸರ್ಜಾ ಅವರ ಜೊತೆ ಮಾತನಾಡಿದಾಗ ಧ್ರುವ ಅವರು ರಶ್ಮಿಕಾ ಅವರಿಗೆ ಡೈಲಾಗ್ ಮೂಲಕ ತಿರುಗೇಟು ನೀಡುತ್ತಾರೆ. ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು ಎಂದು ರಶ್ಮಿಕಾಗೆ ಧ್ರುವ ಸರ್ಜಾ ಅವರು ಡೈಲಾಗ್ ಹೊಡೆದಿದ್ದಾರೆ. ಇನ್ನು ಇದನ್ನು ಗಮನಿಸಿದ ಕನ್ನಡ ಚಿತ್ರ ಪ್ರೇಕ್ಷಕರು ರಶ್ಮಿಕಾ ಅವರಿಗೆ ಈ ಡೈಲಾಗ್ ಚಿತ್ರದಲ್ಲಿ ಮತ್ತು ನಿಜ ಜೀವನದಲ್ಲಿ ಎರಡರಲ್ಲಿಯೂ ಸಹ ಅನ್ವಯಿಸುತ್ತದೆ ಬಿಡಿ ಎಂದು ಟ್ರೋಲ್ ಮಾಡುತ್ತಿದ್ದಾರೆ.