ರಶ್ಮಿಕಾ ಪಾಸ್‌ಪೋರ್ಟ್‌‌‌‌ ನಲ್ಲಿ ಮಂದಣ್ಣ ಬದಲು ಬೇರೆ ಹೆಸರು!

Date:

ಈ ಬಣ್ಣದ ಲೋಕದ ಮಂದಿಯ ಸುದ್ದಿ ಅಂದ್ರೆ ಹಾಗೇ ನೋಡಿ. ಅದು ಸಣ್ಣಪುಟ್ಟ ವಿಷಯವಾದರೂ ಸರಿ ಭಾರೀ ವೈರಲ್ ಆಗಿಬಿಡುತ್ತದೆ.

ಕಳೆದ ಕೆಲ ದಿನಗಳಿಂದ ಮಹಿಳಾ ಸೆಲೆಬ್ರಿಟಿಗಳ ಕೊನೆಯ ಹೆಸರುಗಳು ಬದಲಾಗುತ್ತಲೇ ಅವರು ತಂತಮ್ಮ ಗಂಡಂದಿರಿಗೆ ವಿಚ್ಛೇದನ ಕೊಡುವ ಸಾಧ್ಯತೆ ಇದೆ ಎಂದೆಲ್ಲಾ ಗುಮಾನಿಗಳು ಹಬ್ಬತೊಡಗುತ್ತಿವೆ.

ಟಾಲಿವುಡ್‌ ನಟಿ ಸಮಂತಾ ‘ಅಕ್ಕಿನೇನಿ’ ಎಂದು ಇದ್ದ ತಮ್ಮ ಕೊನೆಯ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ಪ್ರೊಫೈಲ್‌ ನಲ್ಲಿ ತೆಗೆದುಹಾಕಿದ್ದರಿಂದ ಹಿಡಿದು ಪ್ರಿಯಾಂಕಾ ಚೋಪ್ರಾ ಸಹ ಸಾಮಾಜಿಕ ಜಾಲತಾಣದ ಪೋರ್ಟಲ್‌ಗಳಲ್ಲಿ ತಮ್ಮ ಕೊನೆಯ ಹೆಸರು ‘ಜೋನಾಸ್’ ತೆಗೆದು ಹಾಕುವವರೆಗೂ ಅವರವರ ಸಂಬಂಧಗಳ ಸ್ಟೇಟಸ್ ಏನಪ್ಪಾ ಆಯ್ತು ಎಂಬ ಬಗ್ಗೆ ಮಾಧ್ಯಮಗಳಿಗೆ ಎಲ್ಲಿಲ್ಲದ ಕುತೂಹಲ.

ಇದೀಗ ಈ ಕುತೂಹಲ ಕೆರಳಿಸುವ ಸರದಿ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣದಾಗಿದೆ. ರಶ್ಮಿಕಾಗೆ ಇರುವ ಕೊನೆಯ ಹೆಸರೊಂದು ಇದೀಗ ಬಹಿರಂಗಗೊಂಡಿದ್ದು, ಆಕೆಯ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ತನ್ನ ಬೋರ್ಡಿಂಗ್ ಪಾಸ್ ಹಾಗೂ ಪಾಸ್‌ಪೋರ್ಟ್ ಹಂಚಿಕೊಂಡ ರಶ್ಮಿಕಾ, ಅದರಲ್ಲಿ ಅವರ ಕೊನೆಯ ಹೆಸರು ‘Mundachadira’ ಎಂದು ಇರುವುದನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಕ್ರಶ್‌ಗೆ ಮದುವೆ ಗಿದುವೆ ಫಿಕ್ಸ್ ಆಗಿದ್ಯೋ ಎಂದುಕೊಂಡು ಭಾರೀ ಮನಸ್ಸಿನಿಂದ ಈ ಬಗ್ಗೆ ರೀಸರ್ಚ್ ಮಾಡಲು ಹೊರಟ ನಟಿಯ ಅಭಿಮಾನಿಗಳಿಗೆ, ಗೂಗಲ್‌ನಲ್ಲಿ ಹುಡುಕಿದಾಗ ರಶ್ಮಿಕಾ ತಂದೆಯ ಹೆಸರು ಮದನ್ ಮಂದಣ್ಣ Mundachadira ಆಗಿರುವ ಕಾರಣ ‘ಅನ್ಯ’ ರೀತಿಯ ಶಂಕೆಗಳಿಗೆ ಇಲ್ಲಿ ಆಸ್ಪದ ಸಿಕ್ಕಿಲ್ಲ.

ಕೊಡಗಿನ ವಿರಾಜಪೇಟಿಯಲ್ಲಿರುವ ಕೊಡವ ಕುಟುಂಬವೊಂದರ ಕುಡಿಯಾದ ರಶ್ಮಿಕಾ, ಬ್ರಿಟಿಷರ ವಿರುದ್ಧ ಹೋರಾಡಿದ ಕೊಡಗಿನ ರಾಜಮನೆತನಗಳಲ್ಲಿ ಒಂದರಿಂದ ಬಂದಿದ್ದಾರೆ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...