ಡ್ರಗ್ಸ್ ಕೇಸ್ ನಲ್ಲಿಪರಪ್ಪನ ಅಗ್ರಹಾತ ಜೈಲಿನಲ್ಲಿರುವ ನಟಿ ರಾಗಿಣಿಗೆ ಇಂದು ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಕಳೆದ ಐದು ತಿಂಗಳಿಂದ ಜೈಲಿನ ಹಕ್ಕಿಯಾಗಿದ್ದ ರಾಗಿಣಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ.
ಎನ್‍ಡಿಪಿಎಸ್ ಕಾಯ್ದೆ ಪ್ರಕಾರ ಸೆಕ್ಷನ್ 37 ಅತ್ಯಂತ ಗಂಭೀರ ಸ್ವರೂಪವಾಗಿದ್ದು, ಉದ್ದೇಶ ಪೂರ್ವಕವಾಗಿ ಅಪರಾಧ ಮಾಡಿರುವವರ ಮೇಲೆ ಹೇರುವುದಾಗಿದೆ ಮತ್ತು ಈ ಸೆಕ್ಷನ್ ಜಾಮೀನು ರಹಿತವಾಗಿದೆ. ಆದರೆ, ರಾಗಿಣಿ ದ್ವಿವೇದಿ ಪ್ರಕರಣದಲ್ಲಿ ಅದನ್ನು ಅನಗತ್ಯವಾಗಿ ಬಳಕೆ ಮಾಡಲಾಗಿದೆ ಎಂದು ರಾಗಿಣಿ ಪರ ವಕೀಲರು ವಾದಿಸಿದ್ದರು.
ಪೊಲೀಸರು ನಟಿ ರಾಗಿಣಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಮತ್ತು ಆಯೋಜನೆಗೊಳ್ಳುತ್ತಿದ್ದ ಪಾರ್ಟಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ರಾಗಿಣಿ ಮನೆಯಲ್ಲಿ ಶೋಧ ನಡೆಸಿದಾಗ ಯಾವುದೇ ರೀತಿಯ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ವಕೀಲರು ವಾದಿಸಿದ್ದರು.
ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ಸೆಕ್ಷನ್ 37ರ ಅಡಿ ಕೇಸು ದಾಖಲಿಸಿವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಜಾಮೀನು ಮಂಜೂರು ಮಾಡಿದೆ