ಜಗದೀಶ್ ಶೆಟ್ಟರ್ ಅವರ ಸೊಸೆ ದಿವಂಗತ ಸುರೇಶ್ ಅಂಗಡಿ ಅವರ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ತಮ್ಮ ತಂದೆ ಸುರೇಶ್ ಅಂಗಡಿ ಅವರ ಅಕಾಲಿಕ ಮರಣದ ನಂತರ ಶ್ರದ್ಧಾ ಶೆಟ್ಟರ್ ಅವರು ಯಾವುದೇ ರೀತಿಯ ಕಾರ್ಯಕ್ರಮಗಳಲ್ಲಿಯೂ ಸಹ ಭಾಗವಹಿಸಿರಲಿಲ್ಲ.
ಆದರೆ ಬೆಳಗಾವಿಯ ಎಪಿಎಂಸಿ ಆವರಣದಲ್ಲಿ ನಿನ್ನೆ (ಡಿ.25) ಬಿಜೆಪಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್ ಅವರು ವೇದಿಕೆಯನ್ನು ಹಂಚಿಕೊಂಡರು. ಇನ್ನು ಕಾರ್ಯಕ್ರಮದ ಬಳಿಕ ರೈತರನ್ನು ಮಾತನಾಡಿಸಿದ ಶ್ರದ್ಧಾ ಶೆಟ್ಟರ್ ಅವರು ರೈತರ ಜೊತೆ ಸಮಾಲೋಚನೆಯನ್ನು ನಡೆಸುವ ಮೂಲಕ ಗಮನ ಸೆಳೆದರು. ಇನ್ನು ಶ್ರದ್ಧಾ ಶಟ್ಟರ್ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಿಸುವ ಪ್ರಯತ್ನಗಳು ನಡೆಯುತ್ತಿರುವುದು ಗೊತ್ತಿರುವ ವಿಚಾರವೇ ಆಗಿದೆ..