No menu items!
12.4 C
Munich
Wednesday, April 29, 2026

ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಮಾಡಿದವರ ಕುರಿತು ಮಾತನಾಡಿದ ನಟ ಅನಿರುದ್ಧ

Must read

ಕೆಲ ದಿನಗಳ ಹಿಂದಷ್ಟೇ ತೆಲುಗು ನಟನೊಬ್ಬ ವಿಷ್ಣುವರ್ಧನ್ ಅವರ ಕುರಿತು ಕೀಳಾಗಿ ಮಾತನಾಡಿದ್ದಾಗ ನಟ ಅನಿರುದ್ಧ ಅವರು ಆ ನಟನ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಇನ್ನು ಇದಾದ ಬೆನ್ನಲ್ಲೇ ಇದೀಗ ವಿಷ್ಣುವರ್ಧನ್ ಅವರ ಕುರಿತಾಗಿ ಮತ್ತೊಂದು ದುರಂತ ನಡೆದಿದ್ದು ಮಾಗಡಿ ರಸ್ತೆಯಲ್ಲಿನ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಇನ್ನು ಈ ಕುರಿತು ಇದೀಗ ಪ್ರತಿಕ್ರಿಯಿಸಿರುವ ನಟ ಅನಿರುದ್ಧ ಅವರು ತಮ್ಮ ಮಾವನ ಪುತ್ಥಳಿಯನ್ನು ದ್ವಂಸ ಮಾಡಿರುವವರ ವಿರುದ್ಧ ಕಿಡಿಕಾರಿದ್ದಾರೆ.

ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ನಾಶ ಮಾಡಿರುವವರು ಯಾರೇ ಆಗಲಿ ಅವರನ್ನು ಕಂಡುಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕು ಅವರಿಗೆ ತಕ್ಕದಾದ ಶಿಕ್ಷೆ ಆಗಬೇಕು ಎಂದು ಅನಿರುದ್ಧ ಅವರು ಕಿಡಿಗೇಡಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಮೇರುನಟನ ಪುತ್ತಳಿ ಯನ್ನು ಹಾಳು ಮಾಡಿರುವ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸುತ್ತಾರಾ ಇದು ಅಭಿಮಾನಿಗಳು ಮತ್ತು ಕನ್ನಡಿಗರು ಎದುರುನೋಡುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article