ರಾಜ್ಯ ರಾಜಕೀಯ ವಲಯದಲ್ಲಿ ಮೈತ್ರಿಗಾಲದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ. ಸರ್ಕಾರದ ಅಳಿವು ಉಳಿವಿನ ಬಗ್ಗೆ ಉಭಯ ನಾಯಕರು ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಮಾತ್ರಾ ಸಮುದ್ರದ ತೀರದ ರೆಸಾರ್ಟ್ ಒಂದರಲ್ಲಿ ಕೂಲ್ ಆಗಿ ರೆಸ್ಟ್ ಮಾಡುತ್ತಿದ್ದಾರೆ.
ಆದರೆ ಆ ರೆಸಾರ್ಟ್ ಬಳಿ ಯಾವುದೇ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ . ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ದೇವೇಗೌಡ, ಮೈತ್ರಿ ಅಭ್ಯರ್ಥಿಗಳ ಪರ ನಿರಂತರ ಪ್ರಚಾರ ನಡೆಸಿದ್ದರು. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಸದ್ಯ ರೆಸ್ಟ್ ಮೂಡ್ನಲ್ಲಿದ್ದಾರೆ.
ಇದೇ ರೆಸಾರ್ಟ್ ಗೆ ಕುಮಾರಸ್ವಾಮಿ ಹಾಗೂ ಕೆಲ ಸಚಿವರ ಜೊತೆ ವಿಶ್ರಾಂತಿಗೆ ತೆರಳಿದ್ರು.ಆಗಾ ತಾವು ಅಲ್ಲಿದ್ದುಕೊಂಡೇ ಪುತ್ರ, ಸಿಎಂ ಕುಮಾರಸ್ವಾಮಿಗೆ ರಾಜಕೀಯದ ಸಲಹೆ ನೀಡುತ್ತಿದ್ದರು ಎನ್ನಲಾಗಿದೆ. ಸರ್ಕಾರ ಉಳಿಸಿಕೊಳ್ಳುವ ಹಾಗೂ ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ಕುರಿತು ಸಲಹೆ ನೀಡುತ್ತಿದ್ದಾರಂತೆ.