ಇನ್ಮುಂದೆ ಯಾವುದೇ ಹೊಸ ವಾಹನಗಳ ರಿಜಿಸ್ಟ್ರೇಷನ್ ಮಾಡಿಸಿಕೊಳಲ್ಲಾ !? ಕಾರಣ ಗೊತ್ತಾ ?

0
393

ಕರ್ನಾಟಕ ಸೇರಿದಂತೆ ದೇಶಾದ ಎಲ್ಲಾ ಕಡೆ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ಬುಧವಾರದಿಂದಲೇ ನಿಲ್ಲಿಸಲಾಗಿದೆ. ಕಾರಣ ಹೈ ಸೆಕ್ಯೂರಿಟಿ ನಂಬರ್ ಪ್ಲೇಟನ್ನು ವಾಹನಗಳ ಮಾಹಿತಿ ಸಂಗ್ರಹಿಸುವ ಕೇಂದ್ರ ಸಾರಿಗೆ ಇಲಾಖೆಯ ವಾಹನ ಡಾಟಾಬೇಸ್ ನಲ್ಲಿ ಜೋಡಣೆ ಮಾಡದಕ್ಕೆ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಈ ನಿರ್ಧಾರದಿಂದ ಯಾವುದೇ ಹೊಸ ವಾಹನಗಳಿಗೆ ರಿಜಿಸ್ಟ್ರೇಷನ್ ಆಫ್ ಸರ್ಟಿಫಿಕೇಟ್ ನೀಡಲ್ಲ ಎಂದು ಹೇಳಲಾಗುತ್ತಿದೆ.ಆದರೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳು ವಾಹನಗಳ ನೋಂದಣಿಗೆ ವಿಭಿನ್ನ ಸಾಫ್ಟ್ ವೇರ್ ಬಳಸುತ್ತಿರುವುದರಿಂದ ಈ ರಾಜ್ಯಗಳಲ್ಲಿ ನೋಂದಣಿಗೆ ಯಾವುದೇ ಅಡ್ಡಿ ಇರುವುದಿಲ್ಲ.

ಏಪ್ರಿಲ್ 1 ರೊಳಗೆ ಎಲ್ಲ ವಾಹನಗಳು ಇನ್‍ಬಿಲ್ಟ್ ಸೆಕ್ಯೂರಿಟಿ ಫೀಚರ್ಸ್ ನೊಂದಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟನ್ನು ಅಳವಡಿಸಿಕೊಂಡು ರೋಡಿನಲ್ಲಿ ಚಲಿಸಬೇಕಿತ್ತು . ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here