‘ರಾಜಕೀಯ ಕೊಳಚೆಯಲ್ಲಿ ನಿಂತು ವಾಸನೆ ಎಂದು ಹೇಳೋದ್ರಲ್ಲಿ ಅರ್ಥವಿಲ್ಲ’ !?

Date:

ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರ ಶಾಸಕ ಸ್ಥಾನಕ್ಕೆ ನೀಡಲಾಗಿರುವ ರಾಜೀನಾಮೆ ಪತ್ರಗಳ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಎಂದರೆ ಕೊಳಚೆ ಪ್ರದೇಶದಲ್ಲಿ ನಿಂತು ವಾಸನೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ರಾಜಕೀಯ ಎಂಬ ಕೊಳಚೆಪ್ರದೇಶದಲ್ಲಿರುವ ನಾನು ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಂಡು ಹೋಗಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕರ ರಾಜೀನಾಮೆ ಅತ್ಯಂತ ಕೆಟ್ಟ ಬೆಳವಣಿಗೆ. ಜನ ಸಾಮಾನ್ಯರಿಗೆ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಅರ್ಧ ಭಾಗದ ಅಧಿಕಾರವನ್ನು ಅಷ್ಟೇ ನೀಡಿದ್ದೇವೆ. ಅವರನ್ನು ಸರಿಯಾಗಿ ಕೆಲಸ ಮಾಡದಿದ್ದಾಗ ವಾಪಸ್ ಕರೆಸಿಕೊಳ್ಳುವ ಅಧಿಕಾರ ಅವರಿಗಿಲ್ಲ.

ಶಾಸಕರನ್ನು ಆರಿಸಿಕಳುಹಿಸುವುದು ಜನಸಾಮಾನ್ಯರು. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಜನರ ಅಭಿಪ್ರಾಯ ಆಲಿಸುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ನಾನು ಜನಸಾಮಾನ್ಯರ ಅಭಿಪ್ರಾಯವನ್ನ ಕೇಳುತ್ತೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಮದುವೆಯಂತಾಗಿದೆ. ಮದುವೆಯಲ್ಲಿ ತಾಳಿ ಕಟ್ಟುವುದು, ಪುರೋಹಿತ ಹೇಳಿದ ಮಂತ್ರ ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಬೇಕು. ಆದರೆ ವಾದ್ಯ, ತಾಳಮೇಳ ಅಡುಗೆಯವರೇ ಮದುವೆಯಲ್ಲಿ ಪ್ರಮುಖರಾಗುತ್ತಿದ್ದಾರೆ.

ಮದುವೆಗೆ ಬಂದ ಜನ ವರ ತಾಳಿ ಕಟ್ಟಿದ್ದನಾ , ಪುರೋಹಿತರ ಮಂತ್ರ ಅರ್ಥವಾಯಿತೋ ಇಲ್ಲವೋ ಎಂಬ ಯಾವುದನ್ನೂ ಗಮನಿಸುವುದಿಲ್ಲ. ಅಕ್ಷತೆ ಹಾಕುವಷ್ಟು ವ್ಯವಧಾನ ಜನರಿಗಿಲ್ಲ. ತಾಳಮೇಳಗಳ ಸದ್ದೆ ಜಾಸ್ತಿಯಾಗಿರುತ್ತದೆ. ಆಡಂಬರವೇ ಹೆಚ್ಚಾಗಿದ್ದು, ಸಂಪ್ರದಾಯದ ಮದುವೆ ನಶಿಸಿ ಹೋಗಿದೆ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ವಿಧಾನಮಂಡಲದ ಚರ್ಚೆಗಳು ನಗಣ್ಯವಾಗುತ್ತಿವೆ.

ಜನಸಾಮಾನ್ಯರ ಸಮಸ್ಯೆಗಳಿಗಿಂತಲೂ ರಾಜಕೀಯ ಚರ್ಚೆಗಳೇ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು. ಶಾಸಕರ ರಾಜೀನಾಮೆ ವಿಷಯದಲ್ಲಿ ಕಾನೂನಾತ್ಮಕವಾಗಿ ಜನಸಾಮಾನ್ಯರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೇಳಿದಂತೆ ನಡೆದುಕೊಳ್ಳುವುದು ನನ್ನ ಹವ್ಯಾಸ. ಶನಿವಾರ 11.30ರವರೆಗೆ ಕಚೇರಿಯಲ್ಲಿದ್ದೆ. ನಾನು ಹೊರಟ ಮೇಲೆ ಶಾಸಕರು ಕಚೇರಿಗೆ ಬಂದಿದ್ದಾರೆ. ಅದಕ್ಕೂ ಮೊದಲು ಯಾರು ನನ್ನನ್ನು ಸಂಪರ್ಕಿಸಿರಲಿಲ್ಲ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....