ಮೈಸೂರು: 2024ರ ಲೋಕ ಸಮರಕ್ಕೆ ಕಮಲಪಡೆ ಭರ್ಜರಿ ತಯಾರಿ ನಡೆಸುತ್ತಿದೆ. ತಡರಾತ್ರಿ ಮೈಸೂರಿಗೆ ಬಿಜೆಪಿ ಚಾಣಕ್ಯ ಬಂದಿಳಿದಿದ್ದು, ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ್ದಾರೆ. ಅಮಿತ್ ಶಾ ಅವರನ್ನ ಬಿ.ವೈ.ವಿಜಯೇಂದ್ರ
ಸಂಸದ ಪ್ರತಾಪ ಸಿಂಹ, ಶಾಸಕ ಶ್ರೀವತ್ಸ ಹಾಗೂ ಅಧಿಕಾರಿಗಳು ಸ್ವಾಗತಿಸಿದರು.
ವಿಧಾನಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ
ಅಮಿತ್ ಶಾ ಆಗಮಿಸಿದ್ದು, ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿ ದರ್ಶನ ಪಡೆದ ಶಾ,
ಬಳಿಕ ಹೆಲಿಕಾಪ್ಟರ್ ಮೂಲಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮೈಸೂರಿಗೆ ಆಗಮಿಸುತ್ತಾರೆ. 2 ಪ್ರಮುಖ ಸಭೆಗಳಲ್ಲಿ ಅಮಿತ್ ಶಾ ಭಾಗಿಯಾಗಿ ಕೋರ್ ಕಮಿಟಿ ಸಭೆ, ಕ್ಲಸ್ಟರ್ ಸಭೆ ನಡೆಸಲಿದ್ದಾರೆ.